Asianet Suvarna News Asianet Suvarna News

ವೀರ್ಯ ಬಲೂನ್‌: ಸಾಗರಿಕ ಘೋಷ್‌ಗೆ ಟಾಂಗ್ ಕೊಟ್ಟ ಕನ್ನಡಿಗ ವೈದ್ಯ

ದೆಹಲಿಯ ಕಾಲೇಜೊಂದರಲ್ಲಿ ಹೋಳಿ ನೆಪದಲ್ಲಿ ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನ್‌ ಎಸೆಯಲಾಗಿತ್ತು ಎಂಬ ಪ್ರಕರಣ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ದೆಹಲಿ ಮೂಲದ ಪತ್ರಕರ್ತೆಯೊಬ್ಬರು ಘಟನೆ ಖಂಡಿಸಿ, ಟ್ವೀಟ್‌ ಮಾಡಿದ್ದರು.

Delhi University student says Semen filled Balloon thrown

ನವದೆಹಲಿ: ದೆಹಲಿಯ ಕಾಲೇಜೊಂದರಲ್ಲಿ ಹೋಳಿ ನೆಪದಲ್ಲಿ ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನ್‌ ಎಸೆಯಲಾಗಿತ್ತು ಎಂಬ ಪ್ರಕರಣ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ಪತ್ರಕರ್ತೆ ಸಾಗರಿಕಾ ಘೋಷ್ ಘಟನೆ ಖಂಡಿಸಿ, ಟ್ವೀಟ್‌ ಮಾಡಿದ್ದರು.

ಆದರೆ, ಪತ್ರಕರ್ತೆಯ ವಾದಕ್ಕೆ ಕರ್ನಾಟಕ ಮೂಲದ ಡಾ. ಜಗದೀಶ್‌ ಹೀರೇಮಠ್‌ ಎಂಬುವವರು ತಮ್ಮ ಕಾಲಾತೀತಂ ಎಂಬ ಟ್ವೀಟರ್‌ ಖಾತೆ ಮೂಲಕ ತಿರುಗೇಟು ನೀಡಿದ್ದಾರೆ. ಅವರ ತಿರುಗೇಟಿನ ಟ್ವೀಟ್‌ ಇದೀಗ ವೈರಲ್‌ ಆಗಿದೆ.

ವೈದ್ಯರ ವಾದ ಹೀಗಿದೆ. ‘ವೀರ್ಯ ವಾತಾವರಣಕ್ಕೆ ಬಂದ 5 ನಿಮಿಷಗಳಲ್ಲೆ ಒಣಗಿ ಹೋಗುತ್ತದೆ. ಇನ್ನು, ಒಬ್ಬ ವಯಸ್ಕ ಒಂದು ಬಾರಿಗೆ ಸುಮಾರು 5 ಎಂಎಲ್‌ ವೀರ್ಯ ಸ್ಖಲಿಸಬಹುದು. ಪದೇ ಪದೇ ಅದನ್ನು ತೆಗೆಯುವುದು ಅಸಾಧ್ಯ.

 

 

ಹೀಗಾಗಿ ಒಂದು ಬಲೂನ್‌ ವೀರ್ಯ ತುಂಬಬೇಕಾದಲ್ಲಿ, ಕನಿಷ್ಠ 100ಕ್ಕೂ ಅಧಿಕ ಮಂದಿ ಒಂದೇ ಬಾರಿ ಸ್ಖಲಿಸಬೇಕು. ಹೀಗಾಗಿ ಬಲೂನ್‌ನಲ್ಲಿ ಅಷ್ಟುಪ್ರಮಾಣದ ವೀರ್ಯ ತುಂಬುವುದು ಸಾಧ್ಯವಿಲ್ಲ. ಅದಕ್ಕೆ ನೀರು ಮಿಶ್ರಣ ಮಾಡಿದ್ದಾರೆ ಎಂದು ವಾದಿಸಲೂ ಸಾಧ್ಯವಿಲ್ಲ, ಏಕೆಂದರೆ ನೀರಿನಲ್ಲಿ ಮಿಶ್ರಣ ಮಾಡಿದರೆ, ಅದು ಉಳಿಯುವುದಿಲ್ಲ.

ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ವೀರ್ಯ ತುಂಬಿದ ಬಲೂನ್‌ ಎರಚಲಾಯ್ತು ಎಂಬ ವಾದ ಸುಳ್ಳು. ವೃಥಾ ಆರೋಪ ಮಾಡುವ ಬದಲು ಪತ್ರಕರ್ತೆ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ವೈದ್ಯರು ತಿರುಗೇಟು ನೀಡಿದ್ದಾರೆ.

Follow Us:
Download App:
  • android
  • ios