ಸ್ವಯಂಘೋಷಿತ ದೇವಮಹಿಳೆಗೆ ಕಾನೂನಿನ ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳೇ ಮುಖ್ಯ ಠಾಣಾಧಿಕಾರಿಯ ಸೀಟ್'ನಲ್ಲಿ ಕುಳ್ಳಿರಿಸಿ ಗೌರವಿಸಿದ್ದಾರೆ.
ನವದೆಹಲಿ(ಅ.05): ಸ್ವಯಂಘೋಷಿತ ದೇವಮಹಿಳೆಗೆ ಕಾನೂನಿನ ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳೇ ಮುಖ್ಯ ಠಾಣಾಧಿಕಾರಿಯ ಸೀಟ್'ನಲ್ಲಿ ಕುಳ್ಳಿರಿಸಿ ಗೌರವಿಸಿದ್ದಾರೆ.
ದೇಶದಾದ್ಯಂತ ಬಹು ಚರ್ಚೆಗೀಡಾಗಿರುವ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ತನ್ನ ಫ್ಯಾಷನ್'ಗಳಿಗೆ ಫೇಮಸ್ಸು. ಇದೀಗ ಮುಖ್ಯ ಠಾಣಾಧಿಕಾರಿಯ ಸೀಟ್ನಲ್ಲೇ ಕುಳ್ಳಿರಿಸಿ ರಾಧೇ ಮಾಗೆ ಪೊಲೀಸ್ ಸಿಬ್ಬಂದಿ ಗೌರವಿಸಿದ ವಿಚಾರ ಬಹಿರಂಗಗೊಂಡಿದೆ.
ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ ಆರೋಪ ಹೊತ್ತಿರುವ ರಾಧೆ ಮಾರ ತನಿಖೆಗೆಂದು ಸ್ಟೇಷನ್'ಗೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಠಾಣಾಧಿಕಾರಿಯೇ ರಾಧೆ ಮಾ ಪಕ್ಕದಲ್ಲೇ ನಿಂತು ಕೈಮುಗಿದು, ಕೆಂಪು ಶಲ್ಯ ಹೊದ್ದಿಸಿದ್ದಾರೆ. ಸದ್ಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ವಿವಾದ ಸೃಷ್ಟಿಸಿವೆ.
