ದೆಹಲಿ ಮೊಟ್ರೋದಲ್ಲಿ 2 ಕಿ.ಮೀ ವರೆಗೂ ರೂ.10, 2ರಿಂದ 5 ಕಿ.ಮೀಗೆ 20, 5ರಿಂದ12ಕ್ಕೆ 30 ರೂ. 12 ರಿಂದ 21ರವರೆಗೆ ರೂ.40 21ರಿಂದ 32 ಕಿ.ಮೀ ರೂ. 50 ದರವಿದೆ.

ನವದೆಹಲಿ(ನ.24): ಅಕ್ಟೋಬರ್'ನಲ್ಲಿ ಪ್ರಯಾಣ ದರ ಏರಿಸಿದ ಕಾರಣ ದೆಹಲಿ ಮೆಟ್ರೋ ನಿತ್ಯ 3 ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವು ತಿಂಗಳ ಹಿಂದೆ ದರ ಏರಿಕೆಯ ಪ್ರಸ್ತಾವನೆಯನ್ನು ಮುಂದಿಟ್ಟಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಬಲವಾಗಿ ವಿರೋಧಿಸಿದ್ದರು. ಮೆಟ್ರೋ ದರ ಅಕ್ಟೋಬರ್ 10ರಿಂದ ಶೇ.20ರಿಂದ ಶೇ. 50ರವರೆಗೆ ಏರಿಕೆ ಕಂಡಿದ್ದು, ಕಳೆದ 5 ತಿಂಗಳಲ್ಲಿ ಶೇ.100 ಏರಿಕೆಯಾಗಿದೆ. ಇದರಿಂದಾಗಿ ಕಳೆದ ಒಂದು ತಿಂಗಳಲ್ಲಿ 27.4 ಲಕ್ಷ ಪ್ರಯಾಣಿಕರಿಂದ 24.2 ಲಕ್ಷಕ್ಕೆ ಇಳಿಕೆಯಾಗಿದ್ದಾರೆ.

ದೆಹಲಿ ಮೊಟ್ರೋದಲ್ಲಿ 2 ಕಿ.ಮೀ ವರೆಗೂ ರೂ.10, 2ರಿಂದ 5 ಕಿ.ಮೀಗೆ 20, 5ರಿಂದ12ಕ್ಕೆ 30 ರೂ. 12 ರಿಂದ 21ರವರೆಗೆ ರೂ.40, 21ರಿಂದ 32 ಕಿ.ಮೀ ರೂ. 50 ದರವಿದೆ.