ದಿಲ್ಲಿಯ ಪ್ರತಿಷ್ಠಿತ ಶಾಲಿಮಾರ್​ ಭಾಗ್'​ನ ಮ್ಯಾಕ್ಸ್​ ಆಸ್ಪತ್ರೆ  ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಎಡವಟ್ಟು ನಡೆದಿದೆ.  ಅವಧಿ ಪೂರ್ಣವಾಗುವ ಮುನ್ನವೇ ಹುಟ್ಟಿದ ಅವಳಿ ಮಕ್ಕಳು ಜನಿಸುವಾಗಲೇ ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದರು.  ಶವ ಅಂತ್ಯಸಂಸ್ಕಾರ ಮಾಡಲು ಪೋಷಕರು ತೆಗೆದುಕೊಂಡು ಹೋಗುವ ವೇಳೆ ಮಗು ಬದುಕಿರುವುದು ದೃಢವಾಗಿದೆ.

ನವದೆಹಲಿ (ಡಿ.01): ದಿಲ್ಲಿಯ ಪ್ರತಿಷ್ಠಿತ ಶಾಲಿಮಾರ್​ ಭಾಗ್'​ನ ಮ್ಯಾಕ್ಸ್​ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಎಡವಟ್ಟು ನಡೆದಿದೆ. ಅವಧಿ ಪೂರ್ಣವಾಗುವ ಮುನ್ನವೇ ಹುಟ್ಟಿದ ಅವಳಿ ಮಕ್ಕಳು ಜನಿಸುವಾಗಲೇ ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದರು. ಶವ ಅಂತ್ಯಸಂಸ್ಕಾರ ಮಾಡಲು ಪೋಷಕರು ತೆಗೆದುಕೊಂಡು ಹೋಗುವ ವೇಳೆ ಮಗು ಬದುಕಿರುವುದು ದೃಢವಾಗಿದೆ.

ನಮ್ಮ ಮಗು ಹುಟ್ಟುವ ಮೊದಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಅಂತ್ಯ ಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುವಾಗ ಮಗುವಿನಲ್ಲಿ ಚಲನವಲನ ಕಂಡು ಬಂದಿದೆ. ವೈದ್ಯರು ಸುಳ್ಳು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೊಂದು ಅಚಾತುರ್ಯದ ಘಟನೆ. ಸಂಬಂಧಪಟ್ಟ ವೈದ್ಯರನ್ನು ತನಿಖೆ ನಡೆಸಲಾಗುವುದು ಎಂದು ಮ್ಯಾಕ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

ವರ್ಷಾ ಎನ್ನುವ ಗರ್ಭಿಣಿ ಮಹಿಳೆ ಮಂಗಳವಾರ ಮಧ್ಯಾಹ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ನಂತರ ಅವರಿಗೆ ಹೆರಿಗೆಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊದಲು ಗಂಡು ಮಗುವಾಗಿದ್ದು, 15 ನಿಮಿಷಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.