ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯ 10 ಮತ್ತು 12 ನೇ ಕ್ಲಾಸಿನ ಶೈಕ್ಷಣಿಕ ದಾಖಲೆಯನ್ನು ಪರಿಶೋಧನೆ ಮಾಡಲು ಸಿಬಿಎಸ್ ಇಗೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಸೂಚನೆಗೆ ದೆಹಲಿ ನ್ಯಾಯಾಲಯ ತಡೆ ನೀಡಿದೆ.

 ನವದೆಹಲಿ (ಫೆ.21): ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯ 10 ಮತ್ತು 12 ನೇ ಕ್ಲಾಸಿನ ಶೈಕ್ಷಣಿಕ ದಾಖಲೆಯನ್ನು ಪರಿಶೋಧನೆ ಮಾಡಲು ಸಿಬಿಎಸ್ ಇಗೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಸೂಚನೆಗೆ ದೆಹಲಿ ನ್ಯಾಯಾಲಯ ತಡೆ ನೀಡಿದೆ.

Add Asianetnews Kannada as a Preferred SourcegooglePreferred

ಸ್ಮೃತಿ ಇರಾನಿಯವರ ಶೈಕ್ಷಣಿಕ ದಾಖಲೆಯನ್ನು ಬಹಿರಂಗಪಡಿಸುವಂತೆ ಸಿಬಿಎಸ್ಇಗೆ ಕೇಂದ್ರೀಯ ಮಾಹಿತಿ ಆಯೋಗ ನಿರ್ದೇಶಿಸಿತ್ತು. ಆದರೆ ಇದು ವೈಯಕ್ತಿಕ ಮಾಹಿತಿ ಎನ್ನುವ ಅಂಶವನ್ನು ಮುಂದಿಟ್ಟು ಸಿಬಿಎಸ್ಇ ದಾಖಲೆ ಬಹಿರಂಗಗೊಳಿಸಲು ನಿರಾಕರಿಸಿ ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.

1978 ರಲ್ಲಿ ಪಡೆದ ಪಡೆದ ಬಿಎ ಪದವಿ ದಾಖಲೆಯನ್ನು ಪರಿಶೀಲಿಸಲು ಅನುಮತಿ ನೀಡಬೇಕೆಂದು ದೆಹಲಿ ವಿವಿ ಅಧಿಕಾರಿಗಳಿಗೂ ಸಿಐಸಿ ಸೂಚಿಸಿತ್ತು.

ಇಂದು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ತನಿಖೆಗೆ ತಡೆ ನೀಡಿದೆ.