ಆಮ್​ ಆದ್ಮಿ ಪಕ್ಷದ  20 ಶಾಸಕರಿಗೆ  ಬಿಗ್ ರಿಲೀಫ್ ಸಿಕ್ಕಿದೆ. ​​

ಹೊಸದಿಲ್ಲಿ:  ಆಮ್​ ಆದ್ಮಿ ಪಕ್ಷದ 20 ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ​​

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಮಹತ್ವದ ಗೆಲುವು ಸಿಕ್ಕಿದೆ. ಮತ್ತೊಮ್ಮೆ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. 

ಲಾಭದಾಯಕ ಹುದ್ದೆ ಆರೋಪದಡಿಯಲ್ಲಿ 20 ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿತ್ತು. ಈ ಅನರ್ಹತೆ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ​ ಪ್ರಕರಣದ ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ.