. ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳನ್ನು ನಡೆಸಿದ ಪರಿಣಾಮ ಪಕ್ಷದ ಅಧ್ಯಕ್ಷರಾದ ನಿತೀಶ್ ಕುಮಾರ್ ಶರದ್ ಯಾದವ್ ಹಾಗೂ ಅನ್ವರ್ ಅಲಿ ಅವರನ್ನು ಡಿ.4 ರಂದು ಉಚ್ಚಾಟಿಸಲಾಗಿದೆ

ನವದೆಹಲಿ(ಡಿ.15): ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಅವರ ರಾಜ್ಯಸಭಾ ಸದಸ್ಯತ್ವ ಅನರ್ಹತೆಗೆ ಮಧ್ಯಾಂತರ ತಡೆ ನೀಡಲು ದೆಹಲಿ ಕೋರ್ಟ್ ನಿರಾಕರಿಸಿದೆ.

ಆದಾಗ್ಯೂ ಯಾದನ್ ಅವರಿಗೆ ಡಿಎ, ಇತರೆ ಭತ್ಯೆ ಹಾಗೂ ಸಂಸದರ ಬಂಗಲೆ ನೀಡಲು ಅನುಮತಿ ನ್ಯಾಯಮೂರ್ತಿ ವಿಭು ಬಾಕ್ರು ಅನುಮತಿ ನೀಡಿದ್ದು, ಆದರೆ ಜನವರಿ 5ರ ತನಕ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳದಿರಲು ತಡೆ ನೀಡಿದೆ.

ಯಾದವ್ ಅವರ ಅರ್ಜಿ'ಗೆ ಸಂಬಂಧಿಸಿದಂತೆ ಜೆಡಿಯು ರಾಜ್ಯಸಭಾ ನಾಯಕರಾದ ರಾಮ್'ಚಂದ್ರ ಪ್ರಸಾದ್ ಸಿಂಗ್ ಅವರಿಗೆ ಪ್ರತಿಕ್ರಿಯೆ ನೀಡಲು ಕೋರ್ಟ್ ಸೂಚನೆ ನೀಡಿದೆ. ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳನ್ನು ನಡೆಸಿದ ಪರಿಣಾಮ ಪಕ್ಷದ ಅಧ್ಯಕ್ಷರಾದ ನಿತೀಶ್ ಕುಮಾರ್ ಶರದ್ ಯಾದವ್ ಹಾಗೂ ಅನ್ವರ್ ಅಲಿ ಅವರನ್ನು ಡಿ.4 ರಂದು ಉಚ್ಚಾಟಿಸಲಾಗಿದೆ. ಯಾದವ್ ಅವರು ಉಚ್ಚಾಟನೆ ಕ್ರಮವನ್ನು ಅನೈತಿಕ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.