ಪ್ರವಾಹಕ್ಕೆ ಇಲ್ಲಿಯವರೆಗೂ ದೇವರ ನಾಡಲ್ಲಿ 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಡುವ ಸಾಧ್ಯತೆಯಿದೆ.
ತಿರುವನಂತಪುರಂ[ಆ.17]: ಶತಮಾನದ ಮಳೆಗೆ ತತ್ತರಿಸಿರುವ ಕೇರಳ ರಾಜ್ಯಕ್ಕೆ ದೆಹಲಿ ಸರ್ಕಾರವು 10 ಕೋಟಿ ರೂ. ಪರಿಹಾರ ಘೋಷಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರಿಹಾರ ಘೋಷಣೆ ಮಾಡಿದ್ದಾರೆ. ದೇಶದ ಜನತೆ ಮಳೆಯಿಂದ ನಲುಗಿರುವ ಕೇರಳದ ಸೋದರ ಸೋದರಿಯರಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಪ್ರವಾಹಕ್ಕೆ ಇಲ್ಲಿಯವರೆಗೂ ದೇವರ ನಾಡಲ್ಲಿ 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಡುವ ಸಾಧ್ಯತೆಯಿದ್ದು,ಕೇರಳ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಟ್ವೀಟ್ ನಲ್ಲೂ ತಿಳಿಸಿದ್ದಾರೆ.
ಕೇರಳದಲ್ಲಿ 80ಕ್ಕೂ ಹೆಚ್ಚು ಜಲಾಶಯಗಳು ಭರ್ತಿಯಾಗಿವೆ. ಇಲ್ಲಿಯವರೆಗೂ 324 ಮಂದಿ ಪ್ರಾಣ ಕಳೆದುಕೊಂಡು 2 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರಿಗಾಗಿ 1500 ಪರಿಹಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. ತೊಂದರೆಯಲ್ಲಿರುವ ರಾಜ್ಯಕ್ಕೆ ದೇಶದ ಜನರು ಸಹಾಯ ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
