ನವದೆಹಲಿ [ಆ.16]: ರಕ್ಷಾ ಬಂಧನದ ದಿನವಾದ ಗುರುವಾರ ಆಮ್‌ಆದ್ಮಿ ಸರ್ಕಾರ ದೆಹಲಿಯ ಮಹಿಳೆಯರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದೆ.

ಅ.29ರಿಂದ ಜಾರಿಗೆ ಬರುವಂತೆ ದೆಹಲಿಯಾದ್ಯಂತ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ. 

ಇಲ್ಲಿನ ಛತ್ರಾಸಾಲ್‌ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ದಿನದ ಧ್ವಜಾರೋಹಣದ ಬಳಿಕ ಮಾತನಾಡಿದ ಕೇಜ್ರಿವಾಲ್‌ ಈ ವಿಷಯ ಪ್ರಕಟಿಸಿದರು.

ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

ಈ ಹಿಂದೆಯೇ ದೆಹಲಿಯ ಬಸ್‌ ಮತ್ತು ಮೆಟ್ರೋ ಎರಡರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್‌ ಅನ್ನು ಕೇಜ್ರಿ ಪ್ರಕಟಿಸಿದ್ದರು. ಆದರೆ ಮೆಟ್ರೋದಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡದ ಕಾರಣ ಅದು ಬಾಕಿ ಉಳಿದುಕೊಂಡಿದೆ.