ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಳಿಯ ಬಂಧನ

news | Thursday, May 10th, 2018
Sujatha NR
Highlights

ಭ್ರಷ್ಟಾಚಾರ ನಿಗ್ರಹ ದಳವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯನ್ನು ಪಿಡಬ್ಲುಡಿ ಇಲಾಖೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಅರವಿಂದ್ ಕೇಜ್ರಿವಾಲ್ ಅಳಿಯ ವಿನಯ್ ಬನ್ಸಾಲ್ ಎನ್ನುವ ವ್ಯಕ್ತಿಯನ್ನು ಪಿಡಬ್ಲುಡಿ ಇಲಾಖೆಯಲ್ಲಿ ಅಕ್ರಮ ಎಸಗಿರುವ ಸಂಬಂಧ ಬಂಧನಕ್ಕೆ ಒಳಪಡಿಸಲಾಗಿದೆ.  

ನವದೆಹಲಿ : ಭ್ರಷ್ಟಾಚಾರ ನಿಗ್ರಹ ದಳವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯನ್ನು ಪಿಡಬ್ಲುಡಿ ಇಲಾಖೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. 

ಅರವಿಂದ್ ಕೇಜ್ರಿವಾಲ್ ಬಾಮೈದನ ಪುತ್ರ ವಿನಯ್ ಬನ್ಸಾಲ್ ಎನ್ನುವ ವ್ಯಕ್ತಿಯನ್ನು ಪಿಡಬ್ಲುಡಿ ಇಲಾಖೆಯಲ್ಲಿ ಅಕ್ರಮ ಎಸಗಿರುವ ಸಂಬಂಧ ಬಂಧನಕ್ಕೆ ಒಳಪಡಿಸಲಾಗಿದೆ.  

ಕಳೆದ ವರ್ಷ ಮೇ ತಿಂಗಳಲ್ಲಿ  ಈ ಸಂಬಂಧ ಎಸಿಬಿ 3 ಎಫ್ ಐಆರ್ ಗಳನ್ನು ದಾಖಲು ಮಾಡಿಕೊಂಡಿತ್ತು. ಸುರೇಂದ್ರ ಬನ್ಸಾಲ್  ನಡೆಸುತ್ತಿದ್ದ ರೇಣು ಕನ್ ಸ್ಟ್ರಕ್ಷನ್ ಕಂಪನಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿತ್ತು. ಅದಲ್ಲದೇ ಕಮಲ್ ಸಿಂಗ್, ಪವನ್  ಕುಮಾರ್ ಎನ್ನುವವರ ಮೇಲೂ ಪ್ರಕರಣ ದಾಖಲಾಗಿತ್ತು. 

ಹಗರಣ ಸಂಬಂಧ ನಡೆದ ವಿಚಾರಣೆ ವೇಳೆ ಸೂಕ್ತ ರೀತಿಯಲ್ಲಿ ಸಮಾಧಾನಕರವಾದ ಉತ್ತರ ನೀಡದ  ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಬಂಧಿ  ವಿನಯ್ ರನ್ನು  ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. 

ಅಲ್ಲದೇ ಕೇಜ್ರಿವಾಲ್ ಹಾಗೂ ಪಿಡಬ್ಲುಡಿ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರ ವಿರುದ್ಧವೂ ಕೂಡ  ಅಳಿಯ ಬನ್ಸಾಲ್ ಗೆ ಕಾಂಟ್ರಾಕ್ಟ್ ನೀಡುವಲ್ಲಿ  ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪವೂ ಎದುರಾಗಿತ್ತು. 

Comments 0
Add Comment

    Related Posts

    CM Two Constituencies Story

    video | Thursday, April 12th, 2018