ವಿಕ್ರಮಾದಿತ್ಯ ನೌಕೆಯಲ್ಲೇ ರಾತ್ರಿ ಕಳೆದ ರಾಜ್‌ನಾಥ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಒಂದು ದಿನವನ್ನು ಕಳೆದಿದ್ದಾರೆ. ಗೋವಾ ಕರಾವಳಿಯನ್ನು ಕಾವಲು ಕಾಯುತ್ತಿರುವ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ರಾತ್ರಿಯನ್ನು ಕಳೆದ ರಾಜನಾಥ್ ಸಿಂಗ್, ಭಾನುವಾರ ಮುಂಜಾನೆ ನೌಕಾ ಸಿಬ್ಬಂದಿಯ ಜೊತೆ ಯೋಗಾಸನ ಮಾಡಿದರು.
ಪಣಜಿ (ಸೆ. 30): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಒಂದು ದಿನವನ್ನು ಕಳೆದಿದ್ದಾರೆ. ಗೋವಾ ಕರಾವಳಿಯನ್ನು ಕಾವಲು ಕಾಯುತ್ತಿರುವ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ರಾತ್ರಿಯನ್ನು ಕಳೆದ ರಾಜನಾಥ್ ಸಿಂಗ್, ಭಾನುವಾರ ಮುಂಜಾನೆ ನೌಕಾ ಸಿಬ್ಬಂದಿಯ ಜೊತೆ ಯೋಗಾಸನ ಮಾಡಿದರು.
ಭಾರತದ ತೆಕ್ಕೆಗೆ ರಫೇಲ್; ವಿಶೇಷತೆಗಳೇನು? ಇಲ್ಲಿದೆ ವಿವರ!
ಅಲ್ಲದೇ ಬ್ಲಾಕ್ ಪ್ಯಾಂಥರ್ಸ್ಎಂದೇ ಖ್ಯಾತಿಗಳಿಸಿರುವ ಏರ್ ಸ್ವಾರ್ಡರ್ನ್ 303 ಸಿಬ್ಬಂದಿಯ ಜೊತೆ ಸಂವಾದ ನಡೆಸಿದರು. ಈ ವೇಳೆ ತಾವೇ ಸ್ವತಃ ರೈಫಲ್ ಮೂಲಕ ಗುಂಡುಗಳನ್ನು ಹಾರಿಸಿದರು. ಇದೇ ವೇಳೆ ಟ್ವೀಟರ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡ ರಾಜನಾಥ್, ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯನ್ನು ‘ಸಿಕಂದರ್ ಆಫ್ ಸಮುಂದರ್’ (ಸಮುದ್ರದ ರಾಜ) ಎಂದು ಬಣ್ಣಿಸಿದ್ದಾರೆ.