ಸುಖೋಯ್‌ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸಂಚಾರ

First Published 18, Jan 2018, 9:19 AM IST
Defence Minister Sitharaman Flies In Sukhoi Jet In 45 Minute Sortie
Highlights

ಈ ವಿಮಾನ ಗಂಟೆಗೆ 2100 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದಾಗಿದೆ. ಅಂದರೆ ಬೆಂಗಳೂರಿನಿಂದ ದೆಹಲಿಗೆ ಕೇವಲ ಒಂದು ಗಂಟೆಯಲ್ಲಿ ತಲುಪಬಲ್ಲದಾಗಿದೆ.

ಜೋಧ್‌ಪುರ(ಜ.18): ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬುಧವಾರ ಇಲ್ಲಿ ಸುಖೋಯ್ -30 ಎಂಕೆಐ ಯುದ್ಧ ವಿಮಾನದಲ್ಲಿ ಸಂಚರಿಸುವ ಮೂಲಕ ಅದರ ಅನುಭವ ಪಡೆದುಕೊಂಡರು.

ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳ ಪೈಕಿ ಒಂದಾದ ಸುಖೋಯ್ ವಿಮಾನವನ್ನು ಜಿ ಸೂಟ್ (ಭಾರೀ ವೇಗದಲ್ಲಿ ಸಂಚರಿಸುವಾಗ ಗುರುತ್ವಾಕರ್ಷಣೆ ಬಲದ ವ್ಯತ್ಯಯದಿಂದ ಉಂಟಾಗುವ ಹಾನಿ ತಪ್ಪಿಸುವ ಉಡುಗೆ) ತೊಟ್ಟು ಏರಿದ ನಿರ್ಮಲಾ ಜೋಧ್‌ಪುರ ವಿಮಾನ ನಿಲ್ದಾಣದಿಂದ ಸಂಚಾರ ಕೈಗೊಂಡು ಸುಮಾರು 45 ನಿಮಿಷಗಳ ಕಾಲ ಆಗಸದಲ್ಲಿ ಸಂಚರಿಸಿದರು. ಈ ವಿಮಾನ ಗಂಟೆಗೆ 2100 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದಾಗಿದೆ. ಅಂದರೆ ಬೆಂಗಳೂರಿನಿಂದ ದೆಹಲಿಗೆ ಕೇವಲ ಒಂದು ಗಂಟೆಯಲ್ಲಿ ತಲುಪಬಲ್ಲದಾಗಿದೆ.

loader