Asianet Suvarna News Asianet Suvarna News

ಮುಂದಿನ ತಿಂಗಳೇ ರಫೇಲ್‌ ಯುದ್ಧ ವಿಮಾನ ಭಾರತ ಸೇನೆ ಬತ್ತಳಿಕೆಗೆ

 ಐದು ದಿನಗಳ ಕಾಲ ಬಹ್ರೇನ್ ರಾಷ್ಟ್ರಗಳ ಪ್ರವಾಸದಲ್ಲಿ ಮೋದಿ |  ಭಾರತ ಮತ್ತು ಫ್ರಾನ್ಸ್‌ ಜೊತೆಗಿನ 36 ರಫೇಲ್‌ ಯುದ್ಧ ವಿಮಾನಗಳ ವ್ಯಾಪಾರ ಒಪ್ಪಂದದಂತೆ ಮುಂದಿನ ತಿಂಗಳು ಒಂದು ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ ಭಾರತಕ್ಕೆ ನೀಡಲಿದೆ 

Defence Minister IAF Chief to take delivery of first Rafale fighter jet on September
Author
Bengaluru, First Published Aug 23, 2019, 8:43 AM IST
  • Facebook
  • Twitter
  • Whatsapp

ನವದೆಹಲಿ/ಚಾಂಟಿಲಿ (ಆ. 23): ಫ್ರಾನ್ಸ್‌, ಅರಬ್‌ ಸಂಯುಕ್ತ ಸಂಸ್ಥಾನಗಳು ಹಾಗೂ ಬಹ್ರೇನ್‌ ರಾಷ್ಟ್ರಗಳ ಐದು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ಫ್ರಾನ್ಸ್‌ಗೆ ತಲುಪಿದರು.

ಈ ಸಂದರ್ಭದಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರಾನ್‌ ಜೊತೆ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ, ಭದ್ರತಾ ಸಹಕಾರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಮೋದಿ ಅವರು ಚರ್ಚೆ ನಡೆಸಿದರು. ಅಲ್ಲದೆ, ಭಾರತ ಮತ್ತು ಫ್ರಾನ್ಸ್‌ ಜೊತೆಗಿನ 36 ರಫೇಲ್‌ ಯುದ್ಧ ವಿಮಾನಗಳ ವ್ಯಾಪಾರ ಒಪ್ಪಂದದಂತೆ ಮುಂದಿನ ತಿಂಗಳು ಒಂದು ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ ಭಾರತಕ್ಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜೊತೆಗೆ, ಉಭಯ ರಾಷ್ಟ್ರಗಳು ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆ ಸಹಕಾರದ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡಲಿವೆ ಎಂದು ಮೋದಿ ಅವರು ಘೋಷಿಸಿದರು. ಏತನ್ಮಧ್ಯೆ, ಕಾಶ್ಮೀರ ವಿಚಾರವಾಗಿ ಪ್ರತಿಕ್ರಿಯಿಸಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅವರು, ಈ ವಿಚಾರವನ್ನು ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

Follow Us:
Download App:
  • android
  • ios