ನೋಟು ನಿಷೇಧವನ್ನು ಖಂಡಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ 44 ಶಾಸಕರೊಂದಿಗೆ ಸಂಸತ್ ನಿಂದ ರಾಷ್ಟ್ರಪತಿಭವನದವರೆಗೆ ಪಾದಯಾತ್ರೆ ನಡೆಸಿದರು.

ನವದೆಹಲಿ (ನ.16): ನೋಟು ನಿಷೇಧವನ್ನು ಖಂಡಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ 44 ಶಾಸಕರೊಂದಿಗೆ ಸಂಸತ್ ನಿಂದ ರಾಷ್ಟ್ರಪತಿಭವನದವರೆಗೆ ಪಾದಯಾತ್ರೆ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟು ನಿಷೇಧವನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಟಿಎಂಸಿ ನಾಯಕರು ರಾಷ್ಟ್ರಪತಿ ಭವನದೆದುರು ಘೋಷಣೆ ಕೂಗಿದರು. ಹಣದ ಅಪಮೌಲ್ಯೀಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

“ ಇದನ್ನು ಬಹಳ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಕಪ್ಪುಹಣವನ್ನು ಹೊರತರಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಡೆ ಹಿಡಿಯಬೇಕು” ಎಂದು ಟಿಎಂಸಿ ವಕ್ತಾರ ಸುದೀಪ್ ಬಂಡೋಪಾಧ್ಯಾಯ ಮಾಧ್ಯಮಕ್ಕೆ ತಿಳಿಸಿದರು.