ಸರ್ಕಾರೇತರ ಸಂಸ್ಥೆ ಜಾಗೋ ಜನತಾ ಸೊಸೈಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಹೇಶ್ ಚಂದ್ರ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ತೀರ್ಪು ನೀಡಿದೆ. ಇದು ಮಹೇಶ್ ಚಂದ್ರ ಅವರ ಕೊನೆಯ ತೀರ್ಪಾಗಿದ್ದು, ಇಂದು ಅವರು ನಿವೃತ್ತರಾಗುತ್ತಿದ್ದಾರೆ.
ಜೈಪುರ(ಮೇ.31): ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ರಾಜಸ್ತಾನ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಇದರ ಜೊತೆಗೆ ರಾಜ್ಯದಲ್ಲಿ ಗೋವುಗಳನ್ನು ಹತ್ಯೆ ಮಾಡುವವರಿಗೆ ರಾಜಸ್ತಾನ ಬೋವಿನೆ ಕಾಯಿದೆ 1995 ರ ಪ್ರಕಾರ 10 ವರ್ಷದ ಶಿಕ್ಷೆಯ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಸೂಚನೆ ನೀಡಿದೆ.
ಸರ್ಕಾರೇತರ ಸಂಸ್ಥೆ ಜಾಗೋ ಜನತಾ ಸೊಸೈಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಹೇಶ್ ಚಂದ್ರ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ತೀರ್ಪು ನೀಡಿದೆ. ಇದು ಮಹೇಶ್ ಚಂದ್ರ ಅವರ ಕೊನೆಯ ತೀರ್ಪಾಗಿದ್ದು, ಇಂದು ಅವರು ನಿವೃತ್ತರಾಗುತ್ತಿದ್ದಾರೆ.
ಸಂವಿಧಾನದ 48 ಹಾಗೂ 51-ಎ(ಜಿ) ಸೆಕ್ಷನ್ ಪ್ರಕಾರ ಕಾನೂನಿನನ್ವಯ ಗೋವುಗಳಿಗೆ ಸರ್ಕಾರ ಕಡ್ಡಾಯವಾಗಿ ಮಾನ್ಯತೆ ನೀಡಬೇಕಿದೆ ಎಂದಿರುವ ನ್ಯಾಯಾಧೀಶರು ಗೋವುಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡದೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸು ಕೃಷಿ ಹಾಗೂ ಹೈನುಗಾರಿಗೆಯ ಕಾರಣದಿಂದಲೂ ಹಸುಗಳಿಗೆ ಪ್ರಾಧನ್ಯತೆ ನೀಡಬೇಕಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಈಗಾಗಲೇ ಗೋಹತ್ಯೆ ನಿಷೇಧ ಕಾನೂನನನ್ನು ರಾಷ್ಟ್ರಾದ್ಯಂತ ಜಾರಿಗೊಳಿಸಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳು ಕೇಂದ್ರದ ಆದೇಶವನ್ನು ತಿರಸ್ಕರಿಸಿದೆ.