ಮೂರು ಸೇನಾ ಪಡೆಗಳ ನಡುವೆ ಜಂಟಿ ಸಹಯೋಗವನ್ನು ರೂಪಿಸುವುದು ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್)ರ ಹುದ್ದೆ ಸೃಷ್ಟಿಸುವುದು ಈ ಸುಧಾರಣೆಗಳಲ್ಲಿ ಸೇರ್ಪಡೆಗೊಳ್ಳಲಿದೆ. ನಾನು ಈ ಬಗ್ಗೆ ಸ್ಪಷ್ಟವಾಗಿದ್ದೇನೆ. ಎಲ್ಲ ಮೂರು ಪಡೆಗಳನ್ನೂ ಜೊತೆಗೊಯ್ಯಲಿದ್ದೇನೆ ಎಂದು ಪರಿಕ್ಕರ್ ಹೇಳಿದ್ದಾರೆ.
ನವದೆಹಲಿ(ನ.11): ಮುಂದಿನ ಕೆಲವೇ ತಿಂಗಳಲ್ಲಿ ಸೇನಾ ಸುಧಾರಣೆ ನೀತಿಗಳು ಅಂತಿಮಗೊಳ್ಳಲಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಮೂರು ಸೇನಾ ಪಡೆಗಳ ನಡುವೆ ಜಂಟಿ ಸಹಯೋಗವನ್ನು ರೂಪಿಸುವುದು ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್)ರ ಹುದ್ದೆ ಸೃಷ್ಟಿಸುವುದು ಈ ಸುಧಾರಣೆಗಳಲ್ಲಿ ಸೇರ್ಪಡೆಗೊಳ್ಳಲಿದೆ. ನಾನು ಈ ಬಗ್ಗೆ ಸ್ಪಷ್ಟವಾಗಿದ್ದೇನೆ. ಎಲ್ಲ ಮೂರು ಪಡೆಗಳನ್ನೂ ಜೊತೆಗೊಯ್ಯಲಿದ್ದೇನೆ ಎಂದು ಪರಿಕ್ಕರ್ ಹೇಳಿದ್ದಾರೆ.
ಇದೇ ವೇಳೆ, ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಪರಿಕ್ಕರ್ ನೀಡಿರುವ ಹೇಳಿಕೆಯನ್ನು ಟೀಕಿಸಿರುವ ಸಿಪಿಎಂ, ‘‘ಪರಿಕ್ಕರ್ ಹೇಳಿಕೆಯು ಯುಎನ್‌ಎಸ್‌ಸಿ ಮತ್ತು ಎನ್‌ಎಸ್‌ಜಿಗೆ ದೇಶದ ಪ್ರವೇಶ ಯತ್ನಕ್ಕೆ ಹಿನ್ನಡೆ ಉಂಟು ಮಾಡಲಿದೆ,’’ ಎಂದು ಹೇಳಿದೆ.