ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1973, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು. ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು. ಇನ್ನು ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.
ಚೆನ್ನೈ(ಡಿ.06):ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಕರಾಳ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಗೃಹ ಸಚಿವರಾಗಿದ್ದ ಸಿ. ರಾಜಗೋಪಾಲಚಾರಿ ಮೃತಪಟ್ಟಿದ್ದು 1972, ಡಿಸೆಂಬರ್ 25ರಂದು.
ಅದೇ ರೀತಿ, ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1973, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು. ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು. ಇನ್ನು ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.
ಇದೀಗ, ತಮಿಳರ ಆರಾಧ್ಯ ದೈವ ಜಯಲಲಿತಾ ನಿಧನ, ತಮಿಳರ ಪಾಲಿಗೆ ಡಿಸೆಂಬರ್ ಶೋಕಸಾಗರದಲ್ಲಿ ಮುಳುಗಿಸಿದೆ..
