ರಾಹುಲ್ ಗಾಂಧಿ ತಮ್ಮ ‘ಕೈ’ ಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಬೆಜೆಪಿ ನಾಯಕರು ನಿನ್ನೆ ಚುನಾವಣಾ ಆಯೋಗಕ್ಕೆ ದೂರಿದ್ದರು. ಇಂದು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಡಿಯರ್ ಬಿಜೆಪಿ, ಡರೋ ಮತ್' ಎಂದು ಟಾಂಗ್ ನೀಡಿದ್ದಾರೆ.

ನವದೆಹಲಿ (ಜ.18): ರಾಹುಲ್ ಗಾಂಧಿ ತಮ್ಮ ‘ಕೈ’ ಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಜೆಪಿ ನಾಯಕರು ನಿನ್ನೆ ಚುನಾವಣಾ ಆಯೋಗಕ್ಕೆ ದೂರಿದ್ದರು. ಇಂದು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಡಿಯರ್ ಬಿಜೆಪಿ, ಡರೋ ಮತ್' ಎಂದು ಟಾಂಗ್ ನೀಡಿದ್ದಾರೆ.

ಕಳೆದ ವಾರ ನಡೆದ ಕಾಂಗ್ರೆಸ್ ಪಕ್ಷದ ಜನ ವೇದ್ನಾ ಸಮ್ಮೇಳನದಲ್ಲಿ ರಾಹುಲ್ ಗಾಂಧಿ, ತಮ್ಮ ಪಕ್ಷದ ಚಿಹ್ನೆ ‘ಕೈ’ ಯನ್ನು ದೇವರು, ಸಂತರ ಫೋಟೋಗಳಲ್ಲಿ ನೋಡಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಅಸ್ತ್ರವಾಗಿಟ್ಟುಕೊಂಡ ಭಾರತೀಯ ಜನತಾ ಪಕ್ಷ ಕೈ ಚಿಹ್ನೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಮುಂಬರಲಿರುವ ಪಂಚರಾಜ್ಯ ಚುನಾವಣೆಯಲ್ಲಿ ಕೈಯನ್ನು ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಯುವ ನೇತಾರ ತಮ್ಮ ಹೇಳಿಕೆ ಮೂಲಕ ಪಂಚರಾಜ್ಯ ಚುನಾವಣೆಗೆ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಹೇಳಿದ್ದಾರೆ.

Scroll to load tweet…