Asianet Suvarna News Asianet Suvarna News

50 ಲಕ್ಷ ಜನರನ್ನು ಕೊಲ್ಲಬಲ್ಲ ರಾಸಾಯನಿಕ ವಶ: ಪಿಹೆಚ್‌ಡಿ ಪದವೀಧರ ಅಂದರ್!

ಇದು ದೇಶವನ್ನೇ ಬೆಚ್ಚಿ ಬೀಳಿಸಿದ ಸುದ್ದಿ! ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ! 50 ಲಕ್ಷ ಜನರನ್ನು ಕೊಲ್ಲಬಲ್ಲ ರಾಸಾಯನಿಕ ವಸ್ತುಗಳು ವಶಕ್ಕೆ! 9 ಕೆಜಿ ಸಂಶ್ಲೇಷಿತ ರಾಸಾಯನಿಕ ಒಪಿಯಾಡ್ ಹಾಗೂ ಫೆಂಟನೈಲ್ ವಶಕ್ಕೆ! ರಾಸಾಯನಿಕ ಕಂಡು ಬೆಚ್ಚಿ ಬಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಗಳು! ಭಾರತದಲ್ಲಿ ಈ ಪ್ರಮಾಣದ ರಾಸಾಯನಿಕ ವಶಕ್ಕೆ ಪಡೆದಿದ್ದು ಇದೇ ಮೊದಲು

Deadly chemical seized from laboratory Indore PhD Scholar arrested
Author
Bengaluru, First Published Sep 30, 2018, 1:32 PM IST

ಇಂದೋರ್(ಸೆ.30): ಮಧ್ಯ ಪ್ರದೇಶದ ಇಂದೋರ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದ  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು, ಸುಮಾರು 50 ಲಕ್ಷ ಜನರನ್ನು ಕೊಲ್ಲಬಲ್ಲ 9 ಕೆಜಿ ಸಂಶ್ಲೇಷಿತ ಅತ್ಯಂತ ವಿಷಕಾರಿ ರಾಸಾಯನಿಕ ಒಪಿಯಾಡ್ ಹಾಗೂ ಫೆಂಟನೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಗಳ ಸಹಾಯದೊಡನೆ ನಡೆದಿದ್ದ ಈ ದಾಳಿಯ ವೇಳೆ ಅಮೆರಿಕಾ ವಿರೋಧಿಯಾಗಿದ್ದ ಪಿಹೆಚ್‌ಡಿ ಪದವೀಧರ ಹಾಗೂ ಮೆಕ್ಸಿಕೋ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಸ್ಥಳೀಯ ಉದ್ಯಮಿ ಹಾಗೂ ಅಮೆರಿಕದಿಂದ ಪಿಎಚ್‍ಡಿ ಪಡೆದ ರಾಸಾಯನಿಕ ವಿದ್ವಾಂಸ ಪಾಲುದಾರಿಕೆಯಲ್ಲಿ ಈ ಪ್ರಯೋಗಾಲಯ ನಡೆಯುತ್ತಿತ್ತು.

ಈ ಕೆಮಿಕಲ್ಸ್ ಗಳನ್ನು  ರಾಸಾಯನಿಕ ಯುದ್ಧದಲ್ಲಿ ಬಳಕೆ ಮಾಡಿದ್ದಾದರೆ ದೊಡ್ಡ ಪ್ರಮಾಣದ ಸಾವು-ನೋವಿಗೆ ಇದು ಕಾರಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿನಾಶಕಾರಿ ರಾಸಾಯನಿಕ ವಶಕ್ಕೆ ಪಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿ ಎಂದು ಮಾಹಿತಿ ನೀಡಿದ್ದಾರೆ.

ಈ ನಿರ್ದಿಷ್ಟ ದಾಳಿಯ ಮೂಲಕ ಭಾರತದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದನ್ನು ತಡೆಯಲು ಸಾಧ್ಯವಾಗಿದೆ ಎಂದು ಡಿಆರ್‌ಐ ಮಹಾನಿರ್ದೇಶಕ ಡಿ.ಪಿ. ಡ್ಯಾಶ್ ಹೇಳಿದ್ದಾರೆ.

ವಶಕ್ಕೆ ಪಡೆಯಲಾದ ರಾಸಾಯನಿಕಗಳ ಅಂದಾಜು ಮೌಲ್ಯ 110 ಕೋಟಿ ರೂ. ಎನ್ನಲಾಗಿದ್ದು ಫೆಂಟನೈಲ್ ರಾಸಾಯನಿಕ ಹೆರಾಯಿನ್ ಗಿಂತಲೂ 50 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.ಇದರ ಕಣಗಳು ಉಸಿರಾಟದಲ್ಲಿ ಸಿಕ್ಕರೆ ಅದು ಅತ್ಯಂತ ಮಾರಕ ಪರಿಣಾಮವನ್ನುಂಟು ಮಾಡುತ್ತದೆ. 

Follow Us:
Download App:
  • android
  • ios