Asianet Suvarna News Asianet Suvarna News

ಡಿಡಿಪಿಐ ನಾಗೇಶರಿಂದ ಎರಡೇ ದಿನದಲ್ಲಿ 35 ಶಾಸಗಿ ಶಾಲೆಗಳಿಗೆ ಅನುಮತಿ: ಭ್ರಷ್ಟಚಾರ ಬಯಲಿಗೆಳೆದವರಿಗೆ ಧಮ್ಕಿ

ಚಿಕ್ಕಮಗಳೂರಿನಲ್ಲಿ ಆತ ಆಡಿದ್ದೇ ಆಟ ಮಾಡಿದ್ದ ಶಾಸನವಾಗಿಬಿಟ್ಟಿದೆ. ಯಾಕೆಂದರೆ  ಆತ 2ನೇ ದಿನದಲ್ಲಿ 35ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಧಮ್ಕಿ ಹಾಕಿದ್ದಾನೆ. ನನ್ನ ಹತ್ರ ಗನ್ ಇದ್ದು ಅವರನ್ನೇ ಮುಗಿಸುವುದಾಗಿ ಜೀವಬೆದರಿಕೆ ಹಾಕಿದ್ದಾನೆ. ಅಷ್ಟಕ್ಕೂ ಆ ಧಿಮಕ್ ಡಿಡಿಪಿಐ ಯಾರು ಅಂತೀರಾ? ಇಲ್ಲಿದೆ ವಿವರ

DDGP Gave Permission To 35 Private schools within two days

ಚಿಕ್ಕಮಗಳೂರು(ಜೂ.26): ಚಿಕ್ಕಮಗಳೂರಿನಲ್ಲಿ ಆತ ಆಡಿದ್ದೇ ಆಟ ಮಾಡಿದ್ದ ಶಾಸನವಾಗಿಬಿಟ್ಟಿದೆ. ಯಾಕೆಂದರೆ  ಆತ 2ನೇ ದಿನದಲ್ಲಿ 35ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಧಮ್ಕಿ ಹಾಕಿದ್ದಾನೆ. ನನ್ನ ಹತ್ರ ಗನ್ ಇದ್ದು ಅವರನ್ನೇ ಮುಗಿಸುವುದಾಗಿ ಜೀವಬೆದರಿಕೆ ಹಾಕಿದ್ದಾನೆ. ಅಷ್ಟಕ್ಕೂ ಆ ಧಿಮಕ್ ಡಿಡಿಪಿಐ ಯಾರು ಅಂತೀರಾ? ಇಲ್ಲಿದೆ ವಿವರ

ಚಿಕ್ಕಮಗಳೂರಿನ ಡಿಡಿಪಿಐ ನಾಗೇಶ್ ೨೦೧೭-೧೮ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಹಣ ಕೊಟ್ಟವರಿಗೆ ವರ್ಗಾವಣೆ ಮಾಡಿದ್ದರು. ಈತನ ಅಕ್ರಮ ಚಿಕ್ಕಮಗಳೂರು ಜಿಲ್ಲಾಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸಾಬೀತಾಗಿತು. ಹೀಗಾಗಿ ಕಡ್ಡಾಯ  ರಜೆ ಮೇಲೆ ತೆರಳುವಂತೆ ನಾಗೇಶ್‌ಗೆ ಸೂಚನೆ ನೀಡಲಾಗಿತ್ತು.

ಆದರೆ ಈತ ಬೇರೆಯವರಿಗೆ ಚಾರ್ಚ್ ನೀಡದೇ, ಮನಸ್ಸಾದಾಗ ಬಂದು ಸಹಿ ಹಾಕುತ್ತಿದ್ದ. ಅಲ್ಲದೇ  ಲಕ್ಷಾಂತರ ರೂಪಾಯಿ ಹಣ ಪಡೆದು ಎರಡೇ ದಿನಕ್ಕೆ ೩೫ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾನೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಎಲ್ಲರನ್ನು ಮುಗಿಸೋದಾಗಿ ನಾಗೇಶ್ ಬೆದರಿಕೆ ಹಾಕಿದ್ದಾನಂತೆ.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೫ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಈ ಬಾರಿ ೧೮ನೇ ಸ್ಥಾನಕ್ಕೋಗಿದೆ. ಜಿಲ್ಲಾ ಪಂಚಾಯತ್ ಸದಸ್ಯರು ಈ ಡಿಡಿಪಿಐ ನಮಗೆ ಬೇಡ ಅಂದಿದ್ದಕ್ಕೆ ನನ್ನ ಬಳಿ ಗನ್ ಲೈಸನ್ಸ್ ಇದೆ. ೩೩ ಜನ ಜಿಲ್ಲಾ ಪಂಚಾಯತ್ ಸದಸ್ಯರು ಅದ್ಹೇಗ್ ಓಡಾಡ್ತೀರಾ ನೋಡ್ತೇನೆ ಅಂತ ಎಲ್ಲರಿಗೂ ಜೀವಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಸದಸ್ಯರಿಂದ ಕೇಳಿಬಂದಿದೆ.

ಇದೀಗ ಡಿಡಿಪಿಐ ನಾಗೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಒಟ್ನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಿಗೇ ಜೀವ ಬೆದರಿಕೆ ಹಾಕಿರುವ ಈತನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳಬೇಕಾಗಿದೆ.

Follow Us:
Download App:
  • android
  • ios