ಪ್ರಸ್ತುತ ರಾಜಕೀಯ ವಿದ್ಯಮಾನಗಳು ಪಕ್ಷಕ್ಕೆ ಮಾರಕವಾಗಿರೋ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶ ಪ್ರವಾಸ ಮಾಡದಂತೆ ಪರಮೇಶ್ವರ್ ಗೆ ಹೈಕಮಾಂಡ್ ಸೂಚನೆ ನೀಡಿದೆ

ಬೆಂಗಳೂರು[ಸೆ.10]: ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಸಾಧ್ಯತೆಯ ಹಿನ್ನಲೆಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ವಿದೇಶ ಪ್ರವಾಸ ರದ್ದುಗೊಳಿಸಿದ್ದಾರೆ.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋ ದಲ್ಲಿ ಗ್ಲೋಬಲ್ ಕ್ಲೈಮೇಟ್ ಆಕ್ಷನ್ ಸಮ್ಮಿಟ್ ನಲ್ಲಿ ಭಾಗವಹಿಸಲು ಮೂರು ದಿನಗಳ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಪಕ್ಷಕ್ಕೆ ಮಾರಕವಾಗಿರೋ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶ ಪ್ರವಾಸ ಮಾಡದಂತೆ ಪರಮೇಶ್ವರ್ ಗೆ ಹೈಕಮಾಂಡ್ ಸೂಚನೆ ನೀಡಿದೆ.

ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಪ್ರವಾಸವನ್ನು ಡಿಸಿಎಂ ರದ್ದುಗೊಳಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಭೀತಿಯಲ್ಲಿರುವ ಹಿನ್ನೆಲೆ ಹಾಗೂ ಶಾಸಕರನ್ನು ಸೆಳೆಯಲು ಪ್ರತಿಪಕ್ಷ ಬಿಜೆಪಿ ಪ್ಲಾನ್ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು ಸದ್ಯದ ಸ್ಥಿತಿಯಲ್ಲಿ ನಿಗದಿಯಾಗಿದ್ದ ವಿದೇಶ ಪ್ರವಾಸವನ್ನು ರದ್ದುಪಡಿಸಲು ಡಾ.ಜಿ.ಪರಮೇಶ್ವರ್ ಮುಂದಾಗಿದ್ದಾರೆ.