ಪಣಜಿ: ಬುಧವಾರವಷ್ಟೇ ಎಂಜಿಪಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಪ್ರವಾಸೋದ್ಯಮ ಸಚಿವ ಮನೋಹರ್‌ ಅಜಗಾಂವ್ಕರ್‌ ಅವರನ್ನು ಗೋವಾದ ಉಪಮುಖ್ಯಮಂತ್ರಿಯಾಗಿ ನಿಯೋಜಿಸಲಾಗಿದೆ. 

ಇದರೊಂದಿಗೆ ರಾಜ್ಯದಲ್ಲಿ 2ನೇ ಡಿಸಿಎಂ ನೇಮಕವಾಗಿದೆ. ಈಗಾಗಲೇ ಜಿಎಫ್‌ಪಿಯ ವಿಜಯ್‌ ಸರ್‌ದೇಸಾಯಿ ಅವರನ್ನು ಡಿಸಿಎಂ ಆಗಿ ನೇಮಕ ಮಾಡಲಾಗಿದೆ. 

ಈ ಕುರಿತು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು ಡಿಸಿಎಂ ಆಗಿದ್ದ ಎಂಜಿಪಿಯ ಧಾವಳೀಕರನ್ನು ಸರ್ಕಾರ, ಸರ್ಕಾರದ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಹುದ್ದೆಯಿಂದ ಕಿತ್ತುಹಾಕಿತ್ತು.