Asianet Suvarna News Asianet Suvarna News

ತೂತುಕುಡಿ ಹಿಂಸಾಚಾರ: ತಾಮ್ರ ಘಟಕ ವಿಸ್ತರಣೆಗೆ ಹೈಕೋರ್ಟ್ ತಡೆ

ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂಬ  ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. 11 ಮಂದಿ ಮೃತಪಟ್ಟಿದ್ದಾರೆ. 
 

Day after 11 protesters killed, Madras HC stays expansion of Vedanta’s Sterlite plant in Tuticorin

ಚೆನ್ನೈ (ಮೇ. 23): ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂಬ  ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. 11 ಮಂದಿ ಮೃತಪಟ್ಟಿದ್ದಾರೆ. 

ತೂತುಕುಡಿಯಲ್ಲಿರುವ ಸ್ಟೆರಾಲೈಟ್ ತಾಮ್ರ ಘಟಕದ ವಿಸ್ತರಣೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಘಟಕ ವಿಸ್ತರಣೆಗೂ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕೆಂದು ಕೋರ್ಟ್ ಆದೇಶಿಸಿದೆ. 

ಚೆನ್ನೈ'ನಿಂದ 600 ಕಿ.ಮೀ ದೂರದಲ್ಲಿರುವ ತೂತುಕುಡಿಯಲ್ಲಿ ಸ್ಟಿರಲೈಟ್ ತಾಮ್ರ ಘಟಕದಿಂದ ಅಂತರ್ಜಲ ಕಲುಷಿತವಾಗುತ್ತಿದೆ ಎಂದು ಕಳೆದ 100 ದಿನಗಳಿಂದ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 11 ಮಂದಿ ಮೃತಪಟ್ಟಿದ್ದರು.    

Follow Us:
Download App:
  • android
  • ios