Asianet Suvarna News Asianet Suvarna News

26 ವರ್ಷ ಸಿಕ್ಕಿಂ ಆಳಿದ್ದ ಎಸ್‌ಡಿಎಫ್‌ ಎರಡು ದಿನದಲ್ಲಿ ಖಾಲಿ ಖಾಲಿ!

26 ವರ್ಷ ಸಿಕ್ಕಿಂ ಆಳಿದ್ದ ಎಸ್‌ಡಿಎಫ್‌ ಎರಡು ದಿನದಲ್ಲಿ ಖಾಲಿ ಖಾಲಿ!| ಎಸ್‌ಡಿಎಫ್‌ನ ಮತ್ತಿಬ್ಬರು ಶಾಸಕರು ಎಸ್‌ಕೆಎಂಗೆ ಸೇರ್ಪಡೆ| 10 ಶಾಸಕರು ಮಂಗಳವಾರ ದೆಹಲಿಯಲ್ಲಿ ಬಿಜೆಪಿ ಸೇರಿ​ದ್ದ​ರು|  ಪಕ್ಷ​ದಲ್ಲಿ ಈಗ ಮಾಜಿ ಸಿಎಂ ಚಾಮ್ಲಿಂಗ್‌ ಮಾತ್ರವೇ ಬಾಕಿ

Day after 10 SDF MLAs join BJP two others join SKM
Author
Bangalore, First Published Aug 15, 2019, 10:47 AM IST

ಗ್ಯಾಂಗ್ಟ​ಕ್‌[ಆ.15]: ಸಿಕ್ಕಿಂ ಎಂಬ ಈಶಾ​ನ್ಯದ ಪುಟ್ಟರಾಜ್ಯ​ವನ್ನು ಬರೋ​ಬ್ಬರಿ ಎರಡೂವರೆ ದಶ​ಕ​ಗಳ ಕಾಲ ಅಳಿದ್ದ ಸಿಕ್ಕಿಂ ಡೆಮೊ​ಕ್ರಾ​ಟಿ​ಕ್‌ ಫ್ರಂಟ್‌ (ಎ​ಸ್‌​ಡಿ​ಎ​ಫ್‌) ಕೇವಲ ಎರಡೇ ದಿನ​ದಲ್ಲಿ ಖಾಲಿ ಖಾಲಿ​ಯಾ​ಗಿದೆ. ಮಂಗ​ಳ​ವಾ​ರಷ್ಟೇ ಪಕ್ಷದ 10 ಜನ ಶಾಸ​ಕರು ಪಕ್ಷ​ಕ್ಕೆ ಗುಡ್‌ ಬೈ ಹೇಳಿ ಬಿಜೆಪಿ ಸೇರಿ​ದ್ದರು. ಇದಾದ ಮರು​ದಿ​ನವೇ ಇಬ್ಬರು ಶಾಸ​ಕರು ಪಕ್ಷ ತೊರೆ​ದಿದ್ದು, ಆಡ​ಳಿತಾರೂಢ ಸಿಕ್ಕಿಂ ಕ್ರಾಂತಿ​ಕಾರಿ ಮೋರ್ಚಾ (ಎ​ಸ್‌​ಕೆ​ಎಂ) ಪಕ್ಷಕ್ಕೆ ಸೇರಿ​ದ್ದಾರೆ. ಅಲ್ಲಿಗೆ 13 ಶಾಸ​ಕರ ಪೈಕಿ 12 ಮಂದಿ ಗುಳೆ ಹೋಗಿದ್ದು, ಪಕ್ಷದ ಅಧ್ಯಕ್ಷ ಹಾಗೂ 26 ವರ್ಷ ಸಿಕ್ಕಿಂನ ಮುಖ್ಯ​ಮಂತ್ರಿ​ಯಾ​ಗಿದ್ದ ಪವನ್‌ ಕುಮಾರ್‌ ಚಾಮ್ಲಿಂಗ್‌ ಮಾತ್ರ ಪಕ್ಷದಲ್ಲಿ ಬಾಕಿ​ಯಾ​ಗಿ​ದ್ದಾರೆ.

ನಾವು ಆಡ​ಳಿ​ರೂಢ ಎಸ್‌​ಕೆ​ಎಂನ ನೇತೃತ್ವ ಹಾಗೂ ಅಜೆಂಡಾ​ಗ​ಳನ್ನು ಒಪ್ಪಿ​ಕೊಂಡು ಪಕ್ಷ ಸೇರಿ​ದ್ದೇವೆ. ಸದ್ಯ ಸ್ಥಳೀಯರ ಹಿತಾ​ಸ​ಕ್ತಿ​ಗ​ಳನ್ನು ಎತ್ತಿ ಹಿಡಿ​ಯಲು ಪ್ರಾದೇ​ಶಿಕ ಪಕ್ಷ​ವಾಗಿ ಎಸ್‌ಕೆಂ ಮಾತ್ರ ಉಳಿ​ದಿದೆ. ಸೋಮ​ವಾರ 10 ಮಂದಿ ಶಾಸ​ಕರು ಬಿಜೆ​ಪಿಗೆ ಸೇರಿ​ದ್ದರು. ಹಾಗಾ​ಗಿ ನಾವಿ​ಬ್ಬರು ಮಾತು​ಕತೆ ನಡೆಸಿ ಎಸ್‌​ಕೆಎಂ ಸೇರಿ​ದ್ದೇವೆ ಎಂದು ಇಬ್ಬರು ಶಾಸ​ಕರು ಹೇಳಿ​ದ್ದಾರೆ. ಇವ​ರಿ​ಬ್ಬರ ಸೇರ್ಪ​ಡೆ​ಯಿಂದ ಶಾಸನ ಸಭೆ​ಯಲ್ಲಿ ಎಸ್‌​ಕೆಎಂ ಬಲ 18 ಕ್ಕೇರಿದೆ. ಈ ಕ್ಷಿಪ್ರ ಬೆಳ​ವ​ಣಿ​ಗೆ​ಯಿಂದ ಸಿಕ್ಕಿಂ ನಲ್ಲಿ ಒಂದೂ ಸೀಟು ಗೆಲ್ಲದ ಬಿಜೆಪಿ ಅತೀ ದೊಡ್ಡ ವಿರೋಧ ಪಕ್ಷ​ವಾಗಿ ಹೊರ​ಹೊ​ಮ್ಮಿದ್ದು, ಅಧೀ​ಕೃತ ವಿರೋಧ ಪಕ್ಷ​ವಾ​ಗಿದ್ದ ಎಸ್‌​ಡಿ​ಎಫ್‌ ನ ಸಂಖ್ಯಾ​ಬಲ ಕೇವಲ 1 ಕ್ಕೆ ಕುಸಿ​ದಿ​ದೆ.

ಒಂದೂ ಸ್ಥಾನ ಗೆಲ್ಲದ ಬಿಜೆಪಿಗೆ ಈಗ ವಿಪಕ್ಷ ಸ್ಥಾನಮಾನ!

ಒಟ್ಟು 32 ಸಂಖ್ಯಾ​ಬಲ ಇರುವ ಇರುವ ಸಿಕ್ಕಿ ವಿಧಾನ ಸಭೆ​ಗೆ, ಕಳೆದ ಮೇನಲ್ಲಿ ನಡೆದ ಚುನಾ​ವ​ಣೆ​ಯಲ್ಲಿ ಎಸ್‌​ಕೆಎಂ 17 ಹಾಗೂ ಎಸ್‌​ಡಿ​ಎಫ್‌ 15 ಕ್ಷೇತ್ರ​ಗ​ಳಲ್ಲಿ ಗೆಲುವು ಸಾಧಿ​ಸಿ​ತ್ತು. ಎಸ್‌​ಡಿ​ಎ​ಫ್‌ನ ಇಬ್ಬರು ಎರಡು ಕ್ಷೇತ್ರ​ಗ​ಳಲ್ಲಿ ಗೆದ್ದಿ​ದ್ದ​ರಿಂದ ಒಂದು ಕ್ಷೇತ್ರಕ್ಕೆ ರಾಜೀ​ನಾಮೆ ನೀಡಿ​ದ್ದರು. ಹಾಗಾಗಿ ಎಸ್‌​ಕೆಎಂ ಬಲ 13 ಕ್ಕೆ ಕುಸಿ​ದಿತ್ತು. ಈಗ ಎಲ್ಲಾ ಶಾಸ​ಕರ ವಲ​ಸೆ​ಯಿಂದಾಗಿ ಕೇವಲ 1 ಕ್ಕೆ ಇಳಿ​ದಿದೆ.

Follow Us:
Download App:
  • android
  • ios