Asianet Suvarna News Asianet Suvarna News

ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಿಂದಾಸ್ ಲೈಫ್: ಪಾಕಿಸ್ತಾನದಲ್ಲಿ ದಾವುದ್'ಗೆ ಫುಲ್ ಸೆಕ್ಯುರಿಟಿ

ದಾವುದ್ ಇಬ್ರಾಹಿಂ ಅನಾರೋಗ್ಯದಿಂದ ಇನ್ನೇನು ಸಾವಿನ ಅಂಚಿನಲ್ಲಿದ್ದಾನೆ ಅನ್ನೋ ವದಂತಿ ಎಲ್ಲೆಡೆ ಹರಡಿತ್ತು. ಆದರೆ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಪಾಕಿಸ್ತಾನದಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ ಎನ್ನುವ ವಿಷಯ ಬಯಲಾಗಿದೆ.

dawood ibrahim spending luxurious life in pak
  • Facebook
  • Twitter
  • Whatsapp

ಇಸ್ಲಮಾಬಾದ್(ಜೂ.17): ದಾವುದ್ ಇಬ್ರಾಹಿಂ ಅನಾರೋಗ್ಯದಿಂದ ಇನ್ನೇನು ಸಾವಿನ ಅಂಚಿನಲ್ಲಿದ್ದಾನೆ ಅನ್ನೋ ವದಂತಿ ಎಲ್ಲೆಡೆ ಹರಡಿತ್ತು. ಆದರೆ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಪಾಕಿಸ್ತಾನದಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ ಎನ್ನುವ ವಿಷಯ ಬಯಲಾಗಿದೆ.

ಪಾಕಿಸ್ತಾನದ ಕರಾಚಿಯಲ್ಲಿ ಭಾರೀ ಬಿಗಿ ಭದ್ರತೆ ನಡುವೆ ಐಷಾರಾಮಿ ಜೀವನ ಕಳೆಯುತ್ತಿದ್ದಾನೆ ಎನ್ನುವ ಸಂಗತಿ ಬಯಲಾಗಿದೆ. ಇತ್ತೀಚೆಗಷ್ಟೇ ದಾವುದ್ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಎನ್ನುವ ವದಂತಿ ದೇಶಾದ್ಯಂತ ಹರಡಿತ್ತು, ಆದರೆ ಇದೀಗ ಅದು ಕೇವಲ ವದಂತಿಯಷ್ಟೇ ಎನ್ನುವ ಸತ್ಯ ಸಾಬೀತಾಯಿತು.

ಕಳೆದ ಏಪ್ರಿಲ್ 19 ರಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಜಾವೆದ್ ಮಿಯಾಂದಾದ್ ನಿವಾಸದಲ್ಲಿ ಏರ್ಪಡಿಸಿದ್ದ ಭರ್ಜರಿ ಪಾರ್ಟಿಯಲ್ಲಿ ದಾವುದ್ ಕಾಣಿಸಿಕೊಂಡಿದ್ದ. ದಾವೂದ್ ಗೆ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ಭದ್ರತೆ ಒದಗಿಸಿದೆ ಅಂತಾ ತಿಳಿದು ಬಂದಿದೆ.

3 ಹಂತದಲ್ಲಿ ಭದ್ರತೆ ಒದಗಿಸಿದ್ದು, ಮೊದಲ ಹಂತದ ಭದ್ರತೆ ಜವಾಬ್ದಾರಿಯನ್ನ ದಾವುದ್ ಬಂಟ ಜಾವೆದ್ ಚಿಕ್ನಾ ವಹಿಸಿಕೊಂಡಿದ್ರೆ, 2 ನೇ ಹಂತದ ಭದ್ರತೆಯನ್ನ ಐಎಸ್​ಐ ವಹಿಸಿಕೊಂಡಿದೆ. 3 ನೇ ಹಂತದ ಭದ್ರತೆಯನ್ನ ಪಾಕ್ ಪೊಲೀಸರು ಒದಗಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.  

Follow Us:
Download App:
  • android
  • ios