ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಮತ್ತು 1993ರ ಸ್ಫೋಟ ಆರೋಪಿ ಫಾರುಕ್ ಟಕ್ಲಾನ ಪಾಸ್‌ಪೋರ್ಟ್ ನವೀಕರಣ 2011ರ ಯುಪಿಎ ಆಡಳಿತಾವಧಿಯಲ್ಲಿ ಆಗಿದೆ ಎನ್ನಲಾಗಿದೆ.
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಮತ್ತು 1993ರ ಸ್ಫೋಟ ಆರೋಪಿ ಫಾರುಕ್ ಟಕ್ಲಾನ ಪಾಸ್ಪೋರ್ಟ್ ನವೀಕರಣ 2011ರ ಯುಪಿಎ ಆಡಳಿತಾವಧಿಯಲ್ಲಿ ಆಗಿದೆ ಎನ್ನಲಾಗಿದೆ.
ಪ್ರಕ್ರಿಯೆ ಕೇವಲ 24 ಗಂಟೆಗಳಲ್ಲಿ ನಡೆದಿರುವುದು ಹಲವು ಸಂದೇಹಗಳಿಗೆ ಕಾರಣ ವಾಗಿದೆ. ಆಗ ಚಿದಂಬರಂ ಕೇಂದ್ರ ಗೃಹ ಸಚಿವ ರಾಗಿದ್ದರು ಮತ್ತು ಎಸ್. ಎಂ. ಕೃಷ್ಣ ವಿದೇಶಾಂಗ ಸಚಿವರಾಗಿದ್ದರು. ‘ಸೂಕ್ತ ತನಿಖೆಯಿಲ್ಲದೆ, ಹೇಗೆ ಒಂದೇ ದಿನ ಆತನ ಪಾಸ್ಪೋರ್ಟ್ ನವೀಕರಣಗೊಂಡಿತು? ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ’ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಟಕ್ಲಾ 1995ರಿಂದ ತಲೆ ಮರೆಸಿಕೊಂಡಿದ್ದ. ನಕಲಿ ದಾಖಲೆಗಳನ್ನು ನೀಡಿ ಪಾಸ್ಪೋರ್ಟ್ ಪಡೆದಿದ್ದ ಆತ 2011ರಲ್ಲಿ ದುಬೈಯಿಂದಲೇ ಪಾಸ್ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದ್ದರೂ, ಮರು ದಿನವೇ ಪಾಸ್ಪೋರ್ಟ್ ನವೀಕರಣ ಗೊಂಡಿತ್ತು.
ಇಂತಹ ಅರ್ಜಿಗಳು ಪಾಸ್ ಪೋರ್ಟ್ ಅಧಿಕಾರಿಗಳ ಮಿತಿಯಲ್ಲಿ ಇತ್ಯರ್ಥಗೊಳ್ಳುತ್ತವೆ, ಇವು ಸಚಿವರ ವರೆಗೆ ಬರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ.
