ಅಂಡರ್ ವರ್ಲ್ಡ್ ಡಾನ್, 1993ರ ಮುಂಬೈ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗಂಭೀರವಾಗಿದೆಯಂತೆ. ಹೀಗೆಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ದಾವೂದ್ ಇಬ್ರಾಹಿಂಗೆ ಹೃದಯಾಘಾತವಾಗಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಂದಿದೆ.
ಇಸ್ಲಮಾಬಾದ್(ಎ.29): ಅಂಡರ್ ವರ್ಲ್ಡ್ ಡಾನ್, 1993ರ ಮುಂಬೈ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗಂಭೀರವಾಗಿದೆಯಂತೆ. ಹೀಗೆಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ದಾವೂದ್ ಇಬ್ರಾಹಿಂಗೆ ಹೃದಯಾಘಾತವಾಗಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಂದಿದೆ.
ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವ ಭೂಗತ ಪಾತಕಿ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲೇ ವಾಸ್ತವ್ಯ ಹೂಡಿದ್ದು, ಆತನಿಗೆ ಪಾಕ್ ನ ಗುಪ್ತಚರ ಸಂಸ್ಥೆ ಐಎಸ್'ಐ ರಕ್ಷಣೆ ನೀಡುತ್ತಿದೆ. ಇನ್ನು, ಕಳೆದ ವರ್ಷ ದಾವೂದ್ ಗ್ಯಾಂಗ್ರೀನ್ ಕಾಯಿಲೆಯಿಂದ ಬಳಲುತ್ತಿದ್ದು ಪಾಕಿಸ್ತಾನದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿತ್ತು. ಇದೀಗ, ದಾವೂದ್'ಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
1993ರ ಮುಂಬೈ ಬ್ಲಾಸ್ಟ್'ನ ಮಾಸ್ಟರ್ ಮೈಂಡ್ ಆಗಿರುವ ದಾವೂದ್, ಭಾರತಕ್ಕೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ ಪಾತಕಿ.
