ರೈಲು ನಿಲ್ದಾಣಗಳಲ್ಲಿ ವೈಫೈ ಹೊಂದಿದ ನಗರಗಳ ಪಟ್ಟಿಗೆ ರಾಜ್ಯದ ದಾವಣಗೆರೆ ಡಿಜಿಟಲ್ ಇಂಡಿಯಾ ಭಾಗವಾಗಿ ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಯೋಜನೆ
ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ವೈಫೈ ಹೊಂದಿದ ನಗರಗಳ ಪಟ್ಟಿಗೆ ರಾಜ್ಯದ ದಾವಣಗೆರೆ ಸೇರ್ಪಡೆಯಾಗಿದೆ.
ಡಿಜಿಟಲ್ ಇಂಡಿಯಾ ಭಾಗವಾಗಿ ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸುಮಾರು 400 ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ 250ಕ್ಕೂ ಹೆಚ್ಚು ಸ್ಟೇಷನ್'ಗಳಲ್ಲಿ ವೈಫೈ ಸೌಲಭ್ಯವನ್ನು ಆರಂಭಿಸಲಾಗಿದೆ.
ವೈಫೈ ಝೋನ್ ಇರುವ ಸ್ಟೇಷನ್'ಗಳ ಸಾಲಿಗೆ ಇದೀಗ ದಾವಣಗೆರೆ ಸೇರಿದಂತೆ 53 ಗ್ರಾಮೀಣ ಸ್ಟೇಷನ್'ಗಳು ಸೇರ್ಪಡೆಯಾಗಿವೆ ಎಂದು ರೈಲ್ವೇ ಮಂತ್ರಿ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಸಾಫ್ಟ್'ವೇರ್ ದೈತ್ಯ ಗೂಗಲ್ ಸಹಭಾಗಿತ್ವದೊಂದಿಗೆ ಆರಂಭಿಸಲಾದ ಈ ಯೋಜನೆಯ ಭಾಗವಾಗಿ ರಾಜ್ಯದ ಧಾರವಾಡ, ಬೆಂಗಳೂರು ಸಿಟಿ, ಮಂಗಳೂರು ಸೆಂಟ್ರಲ್, ಬಂಗಾರಪೇಟೆ, ಹುಬ್ಬಳ್ಳಿ, ಕೆಂಗೇರಿ, ಯಶವಂತಪುರ, ಕಲಬುರಗಿ ಹಾಗೂ ಮೈಸೂರು ನಿಲ್ದಾಣಗಳಲಲ್ಇ ಈಗಾಗಲೇ ವೈಫೈ ಸೌಲಭ್ಯ ಆರಂಭವಾಗಿದೆ.
ಬೆಂಗಳೂರು ಕ್ಯಾಂಟೊನ್'ಮೆಂಟ್, ಕೃಷ್ಣರಾಜಪುರಂ, ಬೆಳಗಾಂ, ಮಂಗಳೂರು ಜಂ. ಶಿವಮೊಗ್ಗ, ರಾಯಚೂರು , ಯಾದಗಿರಿ, ಬಳ್ಳಾರಿ ಹಾಗೂ ಹೊಸಪೇಟೆ ನಿಲ್ದಾಣಗಳ ಹೆಸರು ಪಟ್ಟಿಯಲ್ಲಿದೆ.
