. ಇಂದು ಮಧ್ಯಾಹ್ನ ಬಾಲಕಿಯ ತಾಯಿ ಮನೆಗೆಲಸ ಮಾಡುವ ವಿಚಾರಕ್ಕೆ ಬೈದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಗಲಕೋಟೆ(ಆ.17): ತಾಯಿ ಬೈದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಪಟ್ಟಣದ ಹಳೆ ಕಚೇರಿ ಬಡಾವಣೆಯಲ್ಲಿ ನಡೆದಿದೆ. ಜ್ಯೋತಿ(16) ಮೃತಳು. ಈಕೆಯ ಪೋಷಕರು ರಸ್ತೆ ಪಕ್ಕ ಅಕ್ಕಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಂದು ಮಧ್ಯಾಹ್ನ ಬಾಲಕಿಯ ತಾಯಿ ಮನೆಗೆಲಸ ಮಾಡುವ ವಿಚಾರಕ್ಕೆ ಬೈದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
