ಕಾಣೆಯಾಗಿದ್ದ ಮಗಳು 30 ವರ್ಷದ ನಂತರ ವಿದೇಶದಿಂದ ಬೆಂಗಳೂರಿಗೆ ಬಂದು ಹೆತ್ತಮ್ಮನನ್ನು ಸೇರಿದಳು

news | Wednesday, January 17th, 2018
Suvarna Web desk
Highlights

ಮುವತ್ತು ವರ್ಷದ ಬಳಿಕ  ಸ್ವಿಡನ್'ನಿಂದ ತನ್ನ ಹೆತ್ತವರನ್ನು ಅರಸುತ್ತ ಬಂದಿರುವ ಹುಡುಗಿಯ ಹೆಸರು ಮರಿಯಾ ಅಲಿಯಾಸ್ ಅರುಣಾ. 1984ರಲ್ಲಿ ಜನಿಸಿದ ಇಕೆ 1988ರವರೆಗೆ ಹುಬ್ಬಳ್ಳಿಯಲ್ಲೇ ಇದ್ದಳು. ನ್ಯುಮೋನಿಯಾ ಕಾಯಿಲೆ ಕಾರಣದಿಂದ ಮನೆಯಿಂದ ತಪ್ಪಿಸಿಕೊಂಡಿದ್ದಳು

1988 ರಲ್ಲಿ ಹೆತ್ತವರಿಂದ ದೂರವಾಗಿದ್ದ ಹುಬ್ಬಳ್ಳಿ ಮೂಲದ ಯುವತಿಯೊಬ್ಬರು ವಿದೇಶಿ ಪ್ರಜೆಗಳಿಗೆ  ದತ್ತು ಪಡೆಯುವದರ ಮೂಲಕ ಸ್ವೀಡನ್ ಹಾರಿದ್ದಳು. ಇದೀಗ ಮತ್ತೆ 30 ವರ್ಷಗಳ ನಂತರ ವಿದೇಶದಿಂದ ತನ್ನ ಹೆತ್ತವರನ್ನು ಅರಸುತ್ತಾ ಬೆಂಗಳೂರಿಗೆ ಆಗಮಿಸಿ ಹೆತ್ತವರನ್ನು ಸೇರಿದ್ದಾಳೆ.

ಮುವತ್ತು ವರ್ಷದ ಬಳಿಕ  ಸ್ವಿಡನ್'ನಿಂದ ತನ್ನ ಹೆತ್ತವರನ್ನು ಅರಸುತ್ತ ಬಂದಿರುವ ಹುಡುಗಿಯ ಹೆಸರು ಮರಿಯಾ ಅಲಿಯಾಸ್ ಅರುಣಾ. 1984ರಲ್ಲಿ ಜನಿಸಿದ ಇಕೆ 1988ರವರೆಗೆ ಹುಬ್ಬಳ್ಳಿಯಲ್ಲೇ ಇದ್ದಳು. ನ್ಯುಮೋನಿಯಾ ಕಾಯಿಲೆಯ ಕಾರಣದಿಂದ ಮನೆಯಿಂದ ತಪ್ಪಿಸಿಕೊಂಡಿದ್ದಳು. ಪೋಷಕರಿಂದ ದೂರವಾಗಿದ್ದ ಇಕೆಯನ್ನು ಸರ್ಕಾರಿ ಶಿಶುವಿಹಾರಕ್ಕೆ ಸೇರಿಸಲಾಗಿತ್ತು. ಹೆತ್ತವರು ಮಗುವಿಗೊಸ್ಕರ ಎಲ್ಲ ಕಡೆ ಹುಡುಕಾಟ ನಡೆಸಿದರೂ ಏನು ಪ್ರಯೋಜನವಾಗಲಿಲ್ಲ.

1990ರಲ್ಲಿ ದತ್ತು ಪಡೆದರು

ಸ್ವಿಡನ್'ನಿಂದ ಆಗಮಿಸಿದ ದಂಪತಿ ಈಕೆಯನ್ನು 1990ರಲ್ಲಿ ದತ್ತು ಪಡೆದು ವಿದೇಶಕ್ಕೆ ಕರೆದುಕೊಂಡು ಹಾರಿದರು. ಮರಿಯಾ ಸ್ವಿಡನ್'ನಲ್ಲೆ ವ್ಯಾಸಂಗ ಮಾಡಿ ನರ್ಸಿಂಗ್ ವ್ಯಾಸಂಗ ಮಾಡಿದ್ದಾಳೆ. ಆದರೆ ಕಳೆದ 2 ವರ್ಷಗಳ ಹಿಂದೆ ತನ್ನ ಸಾಕು ತಂದೆ ತಾಯಿಯಿಂದ ತನ್ನ ನಿಜವಾದ ಹೆತ್ತವರು ಭಾರತದಲ್ಲಿದ್ದಾರೆ ಎಂದು ತಿಳಿದುಕೊಂಡು ಪೋಷಕರನ್ನು ನೋಡಲೇಬೇಕೆಂದು ನಿರ್ಧರಿಸಿ ಮೊದಲಿಗೆ ಫೇಸ್‌ಬುಕ್‌ ಮೂಲಕ ಹುಡುಕಾಟ ಆರಂಭಿಸಿದಳು. ಕೊನೆಗೆ ಸಾಧ್ಯವಾಗದಿದ್ದಾಗ ಬೆಂಗಳೂರಿಗೆ ಆಗಮಿಸಿದಾಗ ಇಬ್ಬರು ಒಂದಾಗಲು  ಸಹಾಯ ಮಾಡಿದ್ದು ಮಾಧ್ಯಮಗಳು.

30 ವರ್ಷದ ಹಿಂದೆ ಮಗಳನ್ನು ಕಳೆದುಕೊಂಡಿದ್ದ ತಾಯಿ ಅರುಣಾಳ ಹಳೆಯ ಫೋಟೊ ಹಾಗೂ ಮೈಮೇಲೆ ಇದ್ದಂತಹ ಮಚ್ಚೆಗಳ ಮೂಲಕ ಪತ್ತೆಹಚ್ಚಿ ಇವಳೇ ತನ್ನ ಮಗಳೆಂದು ಗುರುತಿಸಿದಳು. ಇಬ್ಬರು ಹಲವು ವರ್ಷಗಳ ನಂತರ ಮೊದಲ ಬಾರಿ ನೋಡಿ ಒಬ್ಬರನ್ನೊಬ್ಬರು ಬಿಗಿದಪ್ಪಿದಾಗ ಕಣ್ಣಿನಂಚಿನಲ್ಲಿ ನೀರು ಬಂದಿತು. ದೃಶ್ಯಕ್ಕೆ ಸಾಕ್ಷಿಯಾದವರಿಗೂ ಕೂಡ ಕಣ್ಣು ಒದ್ದೆಯಾಯಿತು. ಇನ್ನು ಕಾನೂನಿನ ಪ್ರಕಾರ ಒಂದಾಗಬೇಕಿದ್ದು ಡಿಎನ್'ಎ ಪರೀಕ್ಷೆಗೆ ನೀಡಿರುವ ವರದಿ ಬರಬೇಕಷ್ಟೆ.

Comments 0
Add Comment

    ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸುತ್ತಿರುವವರಿಗೆ ವಾಸ್ತವಾಂಶ ಬಿಚ್ಚಿಟ್ಟ ಪ್ರಧಾನ ಸಂಪಾದಕರು

    news | Saturday, May 26th, 2018