ಕಾಂಗ್ರೆಸ್ ನಾಯಕಿಯ ಸೊಸೆ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ಕಾಂಗ್ರೆಸ್ ನಾಯಕಿ ರತ್ಮಮ್ಮರವ ಸೊಸೆ ಅಂಬಿಕಾ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆಲ್ಲ ಅತ್ತೆಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಮೈಸೂರು(ಜ.24): ಕಾಂಗ್ರೆಸ್ ನಾಯಕಿಯ ಸೊಸೆ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ಕಾಂಗ್ರೆಸ್ ನಾಯಕಿ ರತ್ಮಮ್ಮರವ ಸೊಸೆ ಅಂಬಿಕಾ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆಲ್ಲ ಅತ್ತೆಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಕಳೆದ 6 ತಿಂಗಳ ಹಿಂದೆಷ್ಟೇ ಅಂಬಿಕಾ ಹಾಗೂ ರತ್ಮಮ್ಮ ರವರ ಮಗ ಗುರುನಾಥ್ ವಿವಾಹ ನಡೆದಿತ್ತು. ಅಲ್ಲದೆ ಗುರುನಾಥ್ನಿಗೆ ಅಂಬಿಕಾ ಮೂರನೇ ಪತ್ನಿಯಾಗಿದ್ದಳು. ಇನ್ನು ಕಳೆದ ವರ್ಷವಷ್ಟೇ ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದ ರತ್ಮಮ್ಮ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿಯಾಗಿದ್ದಳು. ಜೊತೆಗೆ ಸಿಎಂ ಸಿದ್ದರಾಮಯ್ಯನವರು ತನಗೆ ಆಪ್ತರು ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ಸಿಎಂ ಮನೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ರತ್ಮಮ್ಮ, ಸೊಸೆಗೆ ವಿಪರೀತ ಕಿರುಕುಳ ನೀಡುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ.
ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆಗಾಗಿ ಅತ್ತೆ ಮತ್ತು ಗಂಡ ಸೇರಿ ಕೊಲೆ ಮಾಡಿದ್ದಾರೆ ಅಂತ ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವ ತನಕ ಶವ ಇಳಿಸದಂತೆ ಪಟ್ಟು ಹಿಡಿದಿರುವ ಸಂಬಂಧಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
