ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತವಾಗಿದೆ. ಅಭಿಮಾನಿಗಳಲ್ಲಿ ಬೆಳಗ್ಗೆಯಿಂದಲೇ ಆತಂಕ ಮನೆ ಮಾಡಿತ್ತು. ಇದೀಗ ಗಾಯಗೊಂಡಿರುವ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದರ್ಶನ್ ಕಾರಿನಲ್ಲಿ ಇದ್ದವರು ಎಷ್ಟು? ಎಂಬ ಪ್ರಶ್ನೆಯೂ ಮೂಡಿದ್ದು ಅದಕ್ಕೆ ತಕ್ಕ ಉತ್ತರ ಸದ್ಯಕ್ಕೆ ಸಿಗುತ್ತಿಲ್ಲ.

ಮೈಸೂರು[ಸೆ.24]  ಮೊದಲು ದರ್ಶನ್ ಕಾರನ್ನು ಚಾಲಕ ಚಲಾಯಿಸುತ್ತಿದ್ದರು ಎಂದು ಹೇಳಲಾಗಿತ್ತು. ಅಂದರೆ ಅಲ್ಲಿಗೆ ವಾಹನದಲ್ಲಿ ನಾಲ್ಕು ಜನ ಇರಬೇಕು ಎಂದು ಲೆಕ್ಕ. ಹಾಗಾದರೆ ಒಂದಿಷ್ಟು ಪ್ರಶ್ನೆಗಳು ಹಾಗೆ ಇವೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1. ಅಪಘಾತವಾದ ಕಾರಿನಲ್ಲಿ ಇದ್ದ ಒಟ್ಟು ಜನರೆಷ್ಟು?
2. ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಚಾಲಕನೇ ಡ್ರೈವ್ ಮಾಡುತ್ತಿದ್ದರೆ ಅವರು ಎಲ್ಲಿ ಹೋದರು?
3. ಪ್ರತ್ಯಕ್ಷದರ್ಶಿ ಹೇಳಿದ ನಾಲ್ಕನೇ ವ್ಯಕ್ತಿ ಯಾರು?
4. ಅಪಘಾತವಾದ ಸ್ಥಳದಿಂದ 15 ಕಿಮೀ ದೂರ ಚಲಾಯಿಸಲು ಸಾಧ್ಯವಿಲ್ಲದ ಕಾರು ತೆಗೆದುಕೊಂಡು ಹೋದವರು ಯಾರು?
5. ನಂಬರ್ ಪ್ಲೇಟ್ ನಿಜಕ್ಕೂ ಕಿತ್ತು ಬಿದ್ದಿತ್ತಾ? ಅಥವಾ ತೆಗೆಯಲಾಯಿತಾ?
6. ಹೆದ್ದಾರಿಯಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ಆರಂಭದಲ್ಲಿ ಪೊಲೀಸರಿಗೆ ಗೊತ್ತೆ ಆಗಲಿಲ್ವಾ?

ಸದ್ಯಕ್ಕೆ ಈ ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ.

ದರ್ಶನ್ ಕಾರು ಅಪಘಾತದ ಎಲ್ಲ ಸುದ್ದಿಗಳು