Asianet Suvarna News Asianet Suvarna News

ಸಂವಿಧಾನ ಬದಲಿಸುವ ಮಾತು ಮೋದಿ ಹೊಟ್ಟೆಯಲ್ಲಿತ್ತು : ಜಿಗ್ನೇಶ್

ಇಂದು ಶಿರಸಿಗೆ ಆಗಮಿಸಿದ ಜಿಗ್ನೇಶ್ ಮೇವಾನಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.  ಇದೇ ವೇಳೆ  ಜಿಗ್ನೇಶ್ ಮೇವಾನಿ ಮಾತು ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತವಾಗಿದ್ದು, ಇದರ ಹಿಂದೆ ಪಿತೂರಿ ಇದೆ ಎಂದು ಹೇಳಿದ್ದಾರೆ .

Dalit Leader Jignesh Mewani Slams PM Modi

ಶಿರಸಿ : ಇಂದು ಶಿರಸಿಗೆ ಆಗಮಿಸಿದ ಜಿಗ್ನೇಶ್ ಮೇವಾನಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.  ಇದೇ ವೇಳೆ  ಜಿಗ್ನೇಶ್ ಮೇವಾನಿ ಮಾತು ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತವಾಗಿದ್ದು, ಇದರ ಹಿಂದೆ ಪಿತೂರಿ ಇದೆ ಎಂದು ಹೇಳಿದ್ದಾರೆ .

ಗುಜರಾತ್ ವಿಧಾನಸಭಾ ಚುನಾವಣೆ ವೇಳೆಯೂ ಸದಾ ಮಾತ ನಾಡುವಾಗಲೂ ಹೀಗೆ ಆಗುತ್ತದೆ. ಆದರೆ ನಾನು ಬೀದಿಯಲ್ಲಿ ಹುಟ್ಟಿ ಮಾತು ಕಲಿತು ಬೆಳೆದು ಬಂದವ. ನನ್ನ ಧ್ವನಿ ಬೀದಿಯಿಂದಲೇ ಗುಜರಾತ್ ವಿಧಾನಸಭೆ ಪ್ರವೇಶಿಸಿದೆ. ಅಮಿತ್ ಶಾ, ಮೋದಿಯ ಅವರ ಧ್ವನಿಯೇ ನನ್ನ ಧ್ವನಿ ಬಂದ್ ಮಾಡಲು ಆಗಿಲ್ಲ. ಇನ್ನು ಇಂಥ ವಿದ್ಯುತ್ ಕಡಿತ ನನ್ನ ಧ್ವನಿಯ ನಿಲ್ಲಿಸಲು ಅಸಾಧ್ಯ ಎಂದು ಶಿರಸಿಯಲ್ಲಿ ಜಿಗ್ನೇಶ್ ಮೇವಾನಿ ಹೇಳಿಕೆ ನೀಡಿದ್ದಾರೆ.

 ಸಂವಿಧಾನ ಬದಲಿಸುವ ಮತ್ತು ಮುಗಿಸುವ ಮಾತು ಭಾಗವತ್ ಮತ್ತು ಮೋದಿ ಹೊಟ್ಟೆಯಲ್ಲಿ ಅಡಗಿತ್ತು. ಅದು ಅನಂಕುಮಾರ್ ಹೆಗಡೆ ಅವರ ಬಾಯಿಯಿಂದ ಬಂದಿದೆ . ಸಾಮಾಜಿಕ ನ್ಯಾಯದ ಸಮಾನ ಸಮಾಜವನ್ನು ನಾವು ಬಯಸುತ್ತೇವೆ. ಆದರೆ ಇದನ್ನು ಆರ್.ಎಸ್.ಎಸ್. ಮೊದಲಿನಿಂದಲೂ ವಿರೋಧಿಸಿದೆ ಕೋಮುವಾದಿ ರಾಜಕಾರಣದಲ್ಲಿ ಮೆರೆಯುತ್ತಿದೆ .

ಇದನ್ನು ಇದೇ ಕರ್ನಾಟಕದ ಚುನಾವಣೆಯ ಮೂಲಕ ತಡೆಯಿರಿ ಎಂದು ಜಿಗ್ನೇಶ್ ಹೇಳಿದ್ದಾರೆ. ವಡೋದರದಲ್ಲಿ ನನ್ನ ಸೋಲಿಸಲು ಎಲ್ಲಾ ಪ್ರಯತ್ನ ಮಾಡಿದರು ಸಾಧ್ಯ ವಾಗಲಿಲ್ಲ ಗಾಂಧಿ ನಗರ ಮತ್ತು ದೆಹಲಿಯಿಂದ ಅಧಿಕಾರಿಗಳ ಮೇಲೆ ಒತ್ತಡವಿತ್ತು ತಾಂತ್ರಿಕ ಕಾರಣ ಹುಡುಕಿ ಎಂದು. ಅದು ಸಾಧ್ಯವಾಗಲಿಲ್ಲ.

20 ಸಾವಿರ ಮತಗಳ ಅಂತರದಿಂದ ಗೆದ್ದೆವು. ಮೋದಿ ಅವರನ್ನು ಕೇಳಿ. ನಾವು ಹಿಂದೂ . ನಮ್ಮ ಆಕೌಂಟ್ ಗೆ 15 ಲಕ್ಷ ರೂ.ಹಾಕಿ ಎರಡು ಕೋಟಿ ಯುವಜನರಿಗೆ ಉದ್ಯೋಗ ನೀಡಿ ಎಂದು ಕೇಳಿ ಎಂದು ಜಿಗ್ನೇಶ್ ಈ ವೇಳೆ ಹೇಳಿದರು.

ಇನ್ನು ಕರ್ನಾಟಕದ ಚುನಾವಣಾ ಯಾಕೆ ಮಹತ್ವದ್ದು ಅಂದರೆ, ನಾಲ್ಕು ವರ್ಷ ಕೇಂದ್ರ ದ ಆಡಳಿತ ನೋಡಿದ್ದೀರಿ ಆದರೆ ಅವರು ದನದ ಹೆಸರಲ್ಲಿ ರಾಜಕಾರಣ ಮಾಡಿದ್ದಾರೆ. ಲವ್ ಜಿಹಾದ್ ವಿವಾದದಲ್ಲಿ ಕಾಲ ಕಳೆದರು. ದಲಿತರ ಹತ್ಯೆಗಳಾದವು ಈ ಕಾರಣದಿಂದ ಬಿಜೆಪಿ ಸೋಲಿಸಿ.

 ಪ್ರತಿ ಸೆಕೆಂಡು ನಮಗೆ ಮುಖ್ಯ, ರೈತರ ಆತ್ಮಹತ್ಯೆಗೆ ಕೇಂದ್ರ ಯಾಕೆ  ಮೋದಿ ಸ್ಪಂದಿಸಿಲ್ಲ ಎಂದು ಹೇಳಿ. ಹದಿನೈದು ಲಕ್ಷ ಯಾಕೆ ನಮ್ಮ ಆಕೌಂಟ್ ಗೆ ಹಾಕಲಿಲ್ಲ ಎಂದು ಪ್ರಚಾರ ಮಾಡಿ ಎಂದರು.  ಬಾಬಾ ಸಾಹೇಬ್ ಗೆ ಗೌರವ ಕೊಡುವೆ ಎನ್ನುವ ಮೋದಿ ಊನಾ ದಲ್ಲಿ ದಲಿತರ ಚರ್ಮ ಸುಲಿದ ಬಗ್ಗೆ ಮಾತನಾಡುತ್ತಿಲ್ಲ ವೇಮುಲನ ಹತ್ಯೆಗೆ ಪ್ರತಿಕ್ರಿಯಿಸಿಲ್ಲ ಎಂದು ಮೇವಾನಿ ಈ ವೇಳೆ ಟೀಕಿಸಿದರು.

Follow Us:
Download App:
  • android
  • ios