Asianet Suvarna News Asianet Suvarna News

ಮಾನವ ಕಳ್ಳಸಾಗಣೆ ಕೇಸಲ್ಲಿ ಗಾಯಕ ದಲೇರ್‌ ಮೆಹಂದಿ ದೋಷಿ, 2 ವರ್ಷ ಜೈಲು

2003ರಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿ ಪಾಪ್‌ ಗಾಯಕ ದಲೇರ್‌ ಮೆಹಂದಿ ದೋಷಿ ಎಂದು ಪರಿಗಣಿಸಿರುವ ಸ್ಥಳೀಯ ನ್ಯಾಯಾಲಯವೊಂದು, ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Daler Mehndi Convicted  Sentenced To 2 Years Jail

ಪಟಿಯಾಲ: 2003ರಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿ ಪಾಪ್‌ ಗಾಯಕ ದಲೇರ್‌ ಮೆಹಂದಿ ದೋಷಿ ಎಂದು ಪರಿಗಣಿಸಿರುವ ಸ್ಥಳೀಯ ನ್ಯಾಯಾಲಯವೊಂದು, ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಲ್ಲದೆ, 1,000 ರು. ದಂಡವನ್ನೂ ವಿಧಿಸಲಾಗಿದೆ. ಆದಾಗ್ಯೂ, ಜಾಮೀನು ಬಾಂಡ್‌ ಆಧಾರದಲ್ಲಿ ಸದ್ಯಕ್ಕೆ ಅವರು ಬಿಡುಗಡೆಯಾಗಿದ್ದಾರೆ. ದಲೇರ ಮತ್ತು ಅವರ ಸೋದರ ಶಂಶೇರ್‌ ವಿದೇಶಕ್ಕೆ ವಲಸೆ ಹೋಗಲು ಬಯಸಿದವರನ್ನು ತಮ್ಮ ಗಾಯನ ತಂಡದ ಸದಸ್ಯರು ಎಂದು ಹೇಳಿ ವಿದೇಶಕ್ಕೆ ಕರೆದೊಯ್ಯುತ್ತಿದ್ದರು.

ಬಳಿಕ ಅವರನ್ನು ಅಲ್ಲೇ ಬಿಟ್ಟು ಬರುತ್ತಿದ್ದರು. ಹೀಗೆ ಹಣ ಪಡೆದು ಹಲವರನ್ನು ಅಕ್ರಮವಾಗಿ ವಿದೇಶದಲ್ಲಿ ಬಿಟ್ಟು ಬಂದ ಆರೋಪ ಇಬ್ಬರ ಮೇಲೂ ಕೇಳಿಬಂದಿತ್ತು. ಆದರೆ ಇನ್ನು ಕೆಲವರಿಂದ ಹಣ ಪಡೆದರೂ, ಅವರನ್ನು ಸೋದರರು, ವಿದೇಶಕ್ಕೆ ಕರೆದೊಯ್ದಿರಲಿಲ್ಲ ಎನ್ನಲಾಗಿದೆ. ಅಂಥವರು ದೂರು ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿತ್ತು.

 

Follow Us:
Download App:
  • android
  • ios