ಕಾಂಗ್ರೆಸ್​​​​​’ನ ಬಹುತೇಕ ಸಚಿವರು ಹಾಗೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಡೈರಿ ಬಗ್ಗೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇವತ್ತು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮವಿರದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಉಳಿದಿದ್ದರು. 

ಬೆಂಗಳೂರು (ಫೆ.24): ಹೈಕಮಾಂಡ್’ಗೆ ಕಪ್ಪ ಕಾಣಿಕೆ ವಿಚಾರ ಕಾಂಗ್ರೆಸ್​​ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಇವತ್ತು ಶಿವರಾತ್ರಿ ಆಗಿರುವುದರಿಂದ ಸಚಿವರು ಹಾಗೂ ಕಾಂಗ್ರೆಸ್​ ಶಾಸಕರು ತಮ್ಮ ತಮ್ಮ ಕ್ಷೇತ್ರಗಳನ್ನ ತಲುಪಿದ್ದಾರೆ.

ಕಾಂಗ್ರೆಸ್​​​​​’ನ ಬಹುತೇಕ ಸಚಿವರು ಹಾಗೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಡೈರಿ ಬಗ್ಗೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇವತ್ತು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮವಿರದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಉಳಿದಿದ್ದರು. 

ಸಿಎಂ ಸಿದ್ದರಾಮಯ್ಯ ಮನೆ ಬಿಟ್ಟು ಹೊರ ಬರಲಿಲ್ಲ. ನಿವಾಸಕ್ಕೆ ಯಾರೊಬ್ಬರನ್ನೂ ಭದ್ರತಾ ಸಿಬ್ಬಂದಿ ಬಿಡಲಿಲ್ಲ.

ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡರು ಬಂದರೂ ಪ್ರವೇಶ ನಿರಾಕರಿಸಲಾಯ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಥರಾ ಹೊರಟು ಹೋದರು.

ಮಧ್ಯಾಹ್ನ 3 ಗಂಟೆ ಕಳೆದರೂ ಯಾವೊಬ್ಬ ನಾಯಕನನ್ನೂ ಭೇಟಿಯಾಗಿಲ್ಲ.. ಮಾತಾಡಿಲ್ಲ. ಆದರೆ ಗೋವಿಂದರಾಜು ಮಾತ್ರ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.