ಪತ್ನಿ, ಮೂವರು ಮಕ್ಕಳಿದ್ದ ಕುಟುಂಬವಿದ್ದ ಕಾರಣ ತಮ್ಮ ಮಗಳ ಕನಸನ್ನು ನನಸು ಮಾಡುವ ಸಲುವಾಗಿ ಟೀ ಅಂಗಡಿಯನ್ನು ಆರಂಭಿಸಿದರು.
ಡೆಹ್ರಾಡೂನ್(ಜು.04): ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಕ್ರಿಕೇಟರ್ ಆಗಿ ಹೊರಹೊಮ್ಮುತ್ತಿರುವವರು ಎಕ್ತಾ ಬಿಶ್ತ್. 31ರ ಹರೆಯದ ಎಡಗೈ ಸ್ಪಿನ್ನರ್ ಆಗಿರುವ ಇವರು ಇತ್ತೀಚಿಗಷ್ಟೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೇಟ್ ಪಡೆದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು.
ಎಕ್ತಾಳ ಕುಟುಂಬ ಈಗ ಉತ್ತರಾಖಂಡ್'ನ ಅಲ್ಮೋರಾದಲ್ಲಿ ನೆಲೆಸಿದೆ. ಕುತೂಹಲದ ವಿಷಯವೆಂದರೆ ಇವರ ತಂದೆ ಕುಂದನ್ ಸಿಂಗ್ ಬಿಶ್ತ್ ಸೇನೆಯಲ್ಲಿ ಹವಾಲ್ದಾರ್ ಆಗಿದ್ದು, ನಿವೃತ್ತಿ ಪಡೆದ ನಂತರ ಚಹಾ ಅಂಗಡಿ ನಡೆಸುತ್ತಿದ್ದಾರೆ. 1988ರಲ್ಲಿ ನಿವೃತ್ತಿ ಪಡೆದ ಕುಂದನ್ ಅವರಿಗೆ ಕೇವಲ 1500 ರೂ. ನಿವೃತ್ತಿ ವೇತನ ಸಿಗುತ್ತಿತ್ತು. ಪತ್ನಿ, ಮೂವರು ಮಕ್ಕಳಿದ್ದ ಕುಟುಂಬವಿದ್ದ ಕಾರಣ ತಮ್ಮ ಮಗಳ ಕನಸನ್ನು ನನಸು ಮಾಡುವ ಸಲುವಾಗಿ ಟೀ ಅಂಗಡಿಯನ್ನು ಆರಂಭಿಸಿದರು. ಟೀ ಮಾರಿಯೇ ಮಗಳನ್ನು ಉತ್ತಮ ಕ್ರಿಕೆಟರ್ ಆಗಿ ರೂಪಿಸಿದ್ದಾರೆ.
ಹಂತಹಂತವಾಗಿ ಮೇಲೇರಿದ ಎಕ್ತಾ 2011ರಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಅನಂತರವೇ ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಪುತ್ರಿ ಸ್ಟಾರ್ ಆದ ನಂತರ ಚಹಾ ಅಂಗಡಿಯನ್ನು ಮುಚ್ಚಿದರು. ಮಗಳು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂಬುದು ತಂದೆಯ ಆಶಯ.
