‘*0092316545867’ ಸಂಖ್ಯೆ ಯಿಂದ ಗುರುವಾರ ಸಂಜೆ ಐದು ಗಂಟೆ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ. ಮೊಬೈಲ್ ನಿಶಬ್ದವಾಗಿಟ್ಟಿದ್ದ ಕರೆ ಸ್ವೀಕರಿಸಿಲ್ಲ ಎಂದು ರೂಪಾ ಅವರು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು(ಡಿ.08): ರಾಜ್ಯ ರಸ್ತೆ ಸುರಕ್ಷತಾ ವಿಭಾಗದ ಡಿಐಜಿ ಡಿ.ರೂಪಾ ಅವರಿಗೆ ಗುರುವಾರ ಸಂಜೆ ಪಾಕಿಸ್ತಾನದಿಂದ ಅನಾಮಧೇಯ ಕರೆಯೊಂದು ಬಂದಿದೆ.

‘*0092316545867’ ಸಂಖ್ಯೆ ಯಿಂದ ಗುರುವಾರ ಸಂಜೆ ಐದು ಗಂಟೆ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ. ಮೊಬೈಲ್ ನಿಶಬ್ದವಾಗಿಟ್ಟಿದ್ದ ಕರೆ ಸ್ವೀಕರಿಸಿಲ್ಲ ಎಂದು ರೂಪಾ ಅವರು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹನ್ನೊಂದು ಸಂಖ್ಯೆ ಇರುವ ನಂಬರ್‌ನಿಂದ ಕರೆ ಬಂದಿದೆ. ಈ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಪಾಕಿಸ್ತಾನದಿಂದ ಬಂದಿರುವ ಕರೆ ಎಂದು ತಿಳಿಯಿತು. ನನಗೆ ಪಾಕಿಸ್ತಾನದಲ್ಲಿ ಯಾವೊಬ್ಬ ಪರಿಚಯಸ್ಥರು ಇಲ್ಲ. ಕೆಲವೊಮ್ಮೆ ತಮ್ಮ ಎಟಿಎಂ ಪಿನ್ ಸಂಖ್ಯೆ ಹಾಗೂ ಬ್ಯಾಂಕ್‌ನ ಗೌಪ್ಯ ಮಾಹಿತಿ ಪಡೆಯಲು ವಂಚಕರು ಕರೆ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದು ರೂಪಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ಕರೆ ಬಂದರೆ ಸಾರ್ವಜನಿಕರು ಸ್ವೀಕರಿಸಬಾರದು, ಎಚ್ಚರಿಕೆಯಿಂದ ಇರಬೇಕೆಂದು ರೂಪಾ ಅವರು ಹೇಳಿದ್ದಾರೆ.