ಇಂದು ಕೋರ್ಟ್’ಗೆ ಹಾಜರಾಗ್ತಾರಾ ಡಿಕೆಶಿ?

First Published 22, Mar 2018, 7:34 AM IST
D K Shivkumar IT Raid Case Hearing
Highlights

ಐಟಿ ಬಲೆಯಲ್ಲಿ ಸಿಲುಕಿರುವ ಪವರ್​ ಮಿನಿಸ್ಟರ್​ ಇಂದು ಕೋರ್ಟ್​ಗೆ ಹಾಜರಾಗ್ತಾರಾ..? ಆದಾಯಕ್ಕೂ ಮೀರಿ ಆದಾಯ ಗಳಿಕೆ ಹಾಗು ಐಟಿ ದಾಳಿ ವೇಳೆ ಸಾಕ್ಷ್ಯ ನಾಶದ ಆರೋಪದಲ್ಲಿ ಡಿಕೆಶಿ ವಿರುದ್ಧ ಮೂರು ದೂರುಗಳು ದಾಖಲಾಗಿದೆ. ಆರ್ಧಿಕ ಅಪರಾಧಗಳ ನ್ಯಾಯಾಲಯ ಸಮನ್ಸ್​ ನೀಡಿದ್ದು ಇಂದು ಕೋರ್ಟ್​​ಗೆ ಡಿಕೆಶಿ ಹಾಜರಾಗಬೇಕಿದೆ. 

ಬೆಂಗಳೂರು (ಮಾ.22):  ಐಟಿ ಬಲೆಯಲ್ಲಿ ಸಿಲುಕಿರುವ ಪವರ್​ ಮಿನಿಸ್ಟರ್​ ಇಂದು ಕೋರ್ಟ್​ಗೆ ಹಾಜರಾಗ್ತಾರಾ..? ಆದಾಯಕ್ಕೂ ಮೀರಿ ಆದಾಯ ಗಳಿಕೆ ಹಾಗು ಐಟಿ ದಾಳಿ ವೇಳೆ ಸಾಕ್ಷ್ಯ ನಾಶದ ಆರೋಪದಲ್ಲಿ ಡಿಕೆಶಿ ವಿರುದ್ಧ ಮೂರು ದೂರುಗಳು ದಾಖಲಾಗಿದೆ. ಆರ್ಧಿಕ ಅಪರಾಧಗಳ ನ್ಯಾಯಾಲಯ ಸಮನ್ಸ್​ ನೀಡಿದ್ದು ಇಂದು ಕೋರ್ಟ್​​ಗೆ ಡಿಕೆಶಿ ಹಾಜರಾಗಬೇಕಿದೆ. 

ಆಗಸ್ಟ್ ​​ 3, 2017ರಂದು ಐಟಿ ಅಧಿಕಾರಿಗಳು ಈಗಲ್​ಟನ್​ ರೆಸಾರ್ಟ್​​, ಡಿಕೆಶಿವಕುಮಾರ್​ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಡಿಕೆಶಿ ಅವರ 400 ಕೋಟಿ ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಅಲ್ಲದೇ ಈಗಲ್​ಟನ್​ ರೆಸಾರ್ಟ್​​ ನಲ್ಲಿ  ಪ್ರಮುಖವಾದ ದಾಖಲೆಯನ್ನು ಐಟಿ ಅಧಿಕಾರಿಗಳ ಮುಂದೆಯೇ ಡಿಕೆ ಶಿವಕುಮಾರ್​ ನಾಶಮಾಡಿದ್ದರು. ಹರಿದ ಚೂರುಗಳನ್ನ ಜೋಡಿಸಿ ತನಿಖೆ ನಡೆಸಿದ ಐಟಿ ಅಧಿಕಾರಿಗಳು ಅದರಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದು  ಬಯಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದಐಟಿ ಉಪ ನಿರ್ದೇಶಕ ಸುನೀಲ್​ ಗೌತಮ್ ಆರ್ಥಿಕ ವ್ಯವಹಾರಗಳ ನ್ಯಾಯಾಲಯಕ್ಕೆ ಮೂರು ದೂರುಗಳನ್ನು ನೀಡಿದ್ದರು.  

ಐಟಿ ಅಧಿಕಾರಿಗಳ ದಾಳಿ ವೇಳೆ  ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು. ಸದಾಶಿವನಗರದ ಮನೆಯಲ್ಲಿ 7.42 ಕೋಟಿ, ದೆಹಲಿಯ ಸಫ್ದರ್​ಜಂಗ್​ ಮನೆಯಲ್ಲಿ 7.45 ಕೋಟಿ,  ಡಿಕೆಶಿಗೆ ಸೇರಿದ ವಿವಿಧ ಫ್ಲಾಟ್​ಗಳಲ್ಲಿ 10.85ಕೋಟಿ, ಧವನಂ ಕಚೇರಿಯಲ್ಲಿ 9.78ಕೋಟಿ, ಡಿಕೆಶಿ ಅಕೌಂಟ್​ನಲ್ಲಿ 73 ಕೋಟಿ ಪತ್ತೆಯಾಗಿತ್ತು. ಈ ಸಂಬಂಧ ಐಟಿ ವಿಚಾರಣೆ ವೇಳೆಯೂ ಡಿಕೆಶಿ ಅವರಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ಖುದ್ದು ಐಟಿ ನೀಡಿದ್ದ ದೂರಿನ ಅನ್ವಯ ಕೋರ್ಟ್​​ ಮಾರ್ಚ್​​ 22 ರಂದು ಕೋರ್ಟ್​ಗೆ ಹಾಜರಾಗಿ ಉತ್ತರ ನೀಡುವಂತೆ ಸೂಚಿಸಿತ್ತು. 

ಇಂದು ಖುದ್ದಾಗಿ ಡಿಕೆಶಿವಕುಮಾರ್​ ಕೋರ್ಟ್​​ ಕಟಕಟೆಯಲ್ಲಿ ನಿಂತು ಉತ್ತರ ನೀಡಬೇಕಿದೆ. ಆದ್ರೇ, ಪವರ್​ ಮಿನಿಸ್ಟರ್​ ಹಾಜರಾಗ್ತಾರಾ..? ಅಥವಾ ಕೋರ್ಟ್​​ಗೆ ತಮ್ಮ ವಕೀಲರನ್ನು ಕಳುಹಿಸಿ ಕಾಲಾವಕಾಶ ಪಡೆದುಕೊಳ್ತಾರಾ..? ಅನ್ನೋ ಪ್ರಶ್ನೆಗೆ ಡಿಕೆಶಿ ಅವರಿಂದ ಯಾವುದೇ ಸುಳಿವು ಸಿಕ್ಕಿಲ್ಲ. ಚುನಾವಣೆ ಮುಗಿಯವವರೆಗೂ ಕೋರ್ಟ್​ಗೆ ಹಾಜರಾಗದೇ ಬೀಸೋ ದೊಣ್ಣೆಯಿಂದ ಪವರ್​ ಮಿನಿಸ್ಟರ್​ ತಪ್ಪಿಸಿಕೊಳ್ಳೋ ಪ್ಲಾನ್​ ಮಾಡಿದ್ದಾರೆ ಅನ್ನೋ ಮಾತುಗಳೂ ಕೂಡ ಕೇಳಿ ಬಂದಿವೆ . 
 

loader