25ನೇ ವಯಸ್ಸಿಗೆ ದೇವೇಗೌಡ ವಿರುದ್ಧ ಸ್ಪರ್ಧಿಸಿದ್ದರು ಡಿಕೆಶಿ

news | Saturday, March 24th, 2018
Suvarna Web Desk
Highlights

ಕಾಂಗ್ರೆಸ್ಸಿನ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಮ್ಮ 25ನೇ ವಯಸ್ಸಿಗೆ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿದವರು.

ಬೆಂಗಳೂರು (ಮಾ.24): ಕಾಂಗ್ರೆಸ್ಸಿನ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಮ್ಮ 25ನೇ ವಯಸ್ಸಿಗೆ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿದವರು.

ಆ ಕಾಲಕ್ಕೆ ಜನತಾದಳದ ಪ್ರಭಾವಿ ನಾಯಕರಾಗಿದ್ದ ಎಚ್‌.ಡಿ. ದೇವೇಗೌಡರ ಎದುರು ಸ್ಪರ್ಧೆ ಮಾಡಿದ್ದರು. ಹೊಳೆನರಸೀಪುರ ಹಾಗೂ ಕನಕಪುರ ತಾಲೂಕಿನ ಸಾತನೂರು (ಈಗ ಈ ಕ್ಷೇತ್ರ ಅಸ್ತಿತ್ವದಲ್ಲಿ ಇಲ್ಲ) ಎರಡೂ ಕ್ಷೇತ್ರಗಳಿಂದ ದೇವೇಗೌಡರು ಕಣಕ್ಕೆ ಇಳಿದಿದ್ದರು. ಹೊಳೆನರಸೀಪುರದಲ್ಲಿ 3 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಗೌಡರು, ಸಾತನೂರಿನಲ್ಲಿ ಡಿಕೆಶಿ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಅದೊಂದು ಚುನಾವಣೆ ಹೊರತುಪಡಿಸಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ಪರಾಭವಗೊಂಡಿಲ್ಲ.

Comments 0
Add Comment

  Related Posts

  G Parameswar Byte About Election Contest

  video | Friday, April 13th, 2018

  Suresh Gowda Reaction about Viral Video

  video | Friday, April 13th, 2018

  Shreeramulu and Tippeswamy supporters clash

  video | Friday, April 13th, 2018

  Karnataka Elections India Today Pre Poll Survey Part-3

  video | Friday, April 13th, 2018
  Suvarna Web Desk