ಮಂಡ್ಯ (ಮಾ. 09): ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ.  ಚುನಾವಣಾ ಅಖಾಡಕ್ಕೆ ಟ್ರಬಲ್ ಶೂಟರ್ ಡಿಕೆಶಿ ಎಂಟ್ರಿಯಾಗಿದ್ದಾರೆ. 

ಲೋಕಸಭಾ ಚುನಾವಣೆ : ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಯಾಗಲಿದ್ದಾರಾ ಈ ನಾಯಕ..?

ಸುಮಲತಾ ಅಂಬರೀಶ್ ಜೊತೆಗೆ ಗುರುತಿಸಿಕೊಂಡಿರುವ ಅತೃಪ್ತ ಕಾಂಗ್ರೆಸ್ಸಿಗರನ್ನು ಕಟ್ಟಿ ಹಾಕಲು ಡಿಕೆಶಿ ಮುಂದಾಗಿದ್ದಾರೆ. 

ನಾಳೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ಸಿಗರ ಸಭೆ ಕರೆದಿದ್ದಾರೆ ಡಿಕೆಶಿ.  ಔತಣ ಕೂಟದ ಹೆಸರಲ್ಲಿ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ಜೊತೆ ಡಿಕೆಶಿ ಚರ್ಚೆ ನಡೆಸಲಿದ್ದಾರೆ. 

ಲೋಕಸಭಾ ಚುನಾವಣೆ : ಇವರೆಲ್ಲರಿಗೂ ಬಿಜೆಪಿ ಟಿಕೆಟ್ ಖಚಿತ

ಈಗಾಗಲೇ ಸುಮಲತಾಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೂ ಕೆಲ ಕಾಂಗ್ರೆಸ್ಸಿಗರು ಸುಮಾಲತಾ ಜೊತೆಗೆ ಗುರುತಿಸಿಕೊಂಡಿದ್ದಾರೆ.  ಸಿಎಂ ಕುಮಾರಸ್ವಾಮಿ ಒತ್ತಾಯದ ಮೇರೆಗೆ ಮಂಡ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ ಡಿಕೆಶಿ. 

ಅತೃಪ್ತ ನಾಯಕರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇ ಗೌಡ, ಕೆ.ಬಿ.ಚಂದ್ರಶೇಖರ್ ಮನವೊಲಿಕೆಗೆ ಡಿಕೆಶಿ ಕಸರತ್ತು ನಡೆಸುತ್ತಿದ್ದಾರೆ. 
 

"