‘ನಾಡಾ’ ಚಂಡಮಾರುತದ ಪ್ರಭಾವವು ಬೆಂಗಳೂರಿನ ಮೇಲೂ ಬೀರಲಿದ್ದು, ಇಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಭಾಗದಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಚಂಡಮಾರುತವು ತಮಿಳುನಾಡು ರಾಜಧಾನಿ ಆಗ್ನೇಯ ಚೆನ್ನೈನಿಂದ 770 ಕಿ.ಮೀ. ದೂರದಲ್ಲಿದ್ದು ಪಶ್ಚಿಮದ ಕಡೆ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ಚೆನ್ನೈ(ನ.30): ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡ ಮಾರುತವೊಂದು ಸಕ್ರಿಯವಾಗಿದ್ದು, ಅದು ಡಿ.2ರಂದು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಗುರುವಾರದಿಂದ ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಪುದುಚೇರಿಗಳಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನೂ ಇಲಾಖೆ ನೀಡಿದೆ.
‘ನಾಡಾ’ ಚಂಡಮಾರುತದ ಪ್ರಭಾವವು ಬೆಂಗಳೂರಿನ ಮೇಲೂ ಬೀರಲಿದ್ದು, ಇಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಭಾಗದಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಚಂಡಮಾರುತವು ತಮಿಳುನಾಡು ರಾಜಧಾನಿ ಆಗ್ನೇಯ ಚೆನ್ನೈನಿಂದ 770 ಕಿ.ಮೀ. ದೂರದಲ್ಲಿದ್ದು ಪಶ್ಚಿಮದ ಕಡೆ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ಸಂಜೆಯಿಂದಲೇ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ ಹಾಗೂ ಈಗಾಗಲೇ ತೆರಳಿದವರನ್ನು ವಾಪಸ್ ಬರುವಂತೆ ತಿಳಿಸಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಮಿಳುನಾಡಿನಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀರಪ್ರದೇಶದಲ್ಲಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವನ್ನೂ ಆರಂಭಿಸಲಾಗಿದೆ ಎಂದು ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ತಿಳಿಸಿವೆ.