ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿ ನೀಡಿದ ಸುಳಿವು, ಯುವತಿಯರ ಮೊಬೈಲ್ ಫೋನ್‌ ಪರಿಶೀಲಿಸಿದಾಗ ಚಾಟ್‌ಜಿಪಿಟಿ ಯುವತಿಯರ ಸಾವಿನ ಸುಳಿವು ನೀಡಿದೆ.

ಸೂರತ್ (ಮಾ.08) ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ದೇವಸ್ಥಾನದ ಶೌಚಾಲಯದಲ್ಲಿ ಪತ್ತೆಯಾಗಿದೆ. ಯುವತಿಯರು ನಾಪತ್ತೆಯಾದ ಬೆನ್ನಲ್ಲೇ ಹುಡುಕಾಟ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೋಕೇಶನ್ ಆದರಿಸಿ ಪತ್ತೆ ಹಚ್ಚಿದ್ದಾರೆ. ಈ ಸಾವಿನ ಸುಳಿಯವನ್ನು ಯುವತಿಯರು ಬಳಸಿದ ಮೊಬೈಲ್‌ನಲ್ಲಿನ ಚಾಟ್‌ಜಿಪಿಟಿ ಎಐ ನೀಡಿದೆ. ಈ ಘಟನೆ ಗುಜರಾತ್ ಸೂರತ್ ಬಳಿ ಇರುವ ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದಿದೆ.

18, 20ರ ಹರೆಯದ ಇಬ್ಬರು ವಿದ್ಯಾರ್ಥಿನಿಯರು

ರೋಶ್ನಿ ಸಿರ್ಸಾತ್ ಹಾಗೂ ಜೋಶ್ನ ಚೌಧರಿ ಎಂಬ ಇಬ್ಬರು ವಿದ್ಯಾರ್ಥಿನಿಯರ ವಯಸ್ಸು 18 ಹಾಗೂ 20. ದಿಂಡೋಲಿ ವಲಯದ ನಿವಾಸಿಗಳಾಗಿರುವ ಈ ವಿದ್ಯಾರ್ಥಿನಿಯರು ಆತ್ಮೀಯ ಸ್ನೇಹಿತರಾಗಿದ್ದರು. ಮನೆಯಿಂದ ಸ್ಕೂಟರ್ ಮೂಲಕ ಕಾಲೇಜಿಗೆ ತೆರಳಿದ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನಗೆ ಬಂದಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ನಾಪತ್ತೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಲು ಮುಂದಾಗಿದ್ದಾರೆ.

ಟವರ್ ಲೋಕೇಶನ್ ಮೂಲಕ ಪತ್ತೆ

ಪೊಲೀಸರು ತಕ್ಷಣವೇ ಟವರ್ ಲೋಕೇಶನ್ ಮೂಲಕ ವಿದ್ಯಾರ್ಥಿನಿಯರ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಇದು ಆತ್ಮೀಯ ಸಂಸ್ಕಾರ ಧಾಮ ಸ್ವಾಮಿ ನಾರಾಯಣ ದೇವಸ್ಥಾನದ ಆವರಣ ತೋರಿಸಿತ್ತು. ಹೀಗಾಗಿ ಪೊಲೀಸರು ತಂಡ ನೇರವಾಗಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಬಂದಿತ್ತು. ಈ ವೇಳೆ ಯುವತಿಯರ ಸ್ಕೂಟರ್ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿತ್ತು.

ದೇವಸ್ಥಾನದ ಸಿಸಿಟಿವಿ ಪರೀಶಿಲಿಸಿದ ಪೊಲೀಸ್

ಇತ್ತ ಪೊಲೀಸರು ದೇವಸ್ಥಾನದ ಎಲ್ಲಾ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ದೇವಸ್ಥಾನದ ಶೌಚಾಲಯಕ್ಕೆ ತೆರಳಿರುವ ದೃಶ್ಯಗಳು ಲಭ್ಯವಾಗಿದೆ. ಆದರೆ ಶೌಚಾಲಯದಿಂದ ಈ ವಿದ್ಯಾರ್ಥಿಗಳು ಮರಳಿಲ್ಲ. ಹೀಗಾಗಿ ಪೊಲೀಸರು ಶೌಚಾಲಯದ ಬಳಿಕ ಬಂದು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಇಬ್ಬರು ಯುವತಿಯರು ಶವ ಪತ್ತೆಯಾಗಿದೆ.

ಚಾಟ್‌ಜಿಪಿಟಿ ನೀಡಿದ ಸುಳಿವು

ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರೆ, ಇತ್ತ ಯುವತಿಯರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಬಳಿಕ ಮೊಬೈಲ್ ಫೋನ್ ಪರೀಶಿಲಿಸಿದ್ದಾರೆ. ಈ ವೇಳೆ ಇಬ್ಬರು ಯುವತಿಯರು ನೋವಿಲ್ಲದೆ ಬದುಕು ಅಂತ್ಯಗೊಳಿಸುವುದು ಹೇಗೆ ಎಂದು ಚಾಟ್‌ಜಿಪಿಟಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಅರಿವಳಿಕೆ ಮದ್ದಿನ ಡೋಸ್ ಹೆಚ್ಚಾಗಿ ಮೃತಪಟ್ಟ ಘಟನೆಗಳ ಸುದ್ದಿಯ ಸ್ಕ್ರೀನ್ ಶಾಟ್‌ಕೂಟ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಇವರ ಮೃತದೇಹದ ಪಕ್ಕದಲ್ಲೇ ಅರಿವಳಿಕೆ ಮದ್ದು ಚುಚ್ಚಿಕೊಳ್ಳಳು ಬಳಸಿದ ಸಿರಿಂಜ್ ಸೇರಿದಂತ ಇತರ ವಸ್ತುಗಳು ಪತ್ತೆಯಾಗಿದೆ. ಸ್ವಯಂ ಬದುಕು ಅಂತ್ಯಗೊಳಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಚಾಟ್‌ಜಿಪಿಟಿ ಈ ಸುಳಿವು ನೀಡಿದೆ. ಇದೀಗ ಸಾವಿಗೆ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊನೆಯ ಕರೆ, ಸತತ ಕರೆಗಳ ಮಾಹಿತಿ, ಮೆಸೇಜ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.