ನವದೆಹಲಿ[ಮೇ.26]: ಗಾಂಧೀ ಕುಟುಂಬಕ್ಕೆ ಹೊರತಾದ ವ್ಯಕ್ತಿಯೊಬ್ಬರನ್ನು, ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಎಂಬ ರಾಹುಲ್‌ ಗಾಂಧಿ ಮಾಡಿದ ಮನವಿ, ಸಿಡಬ್ಲುಸಿ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ನಾಯಕರನ್ನು ಒಮ್ಮೆ ದಿಗ್ಭ್ರಾಂತರನ್ನಾಗಿ ಮಾಡಿತು ಎನ್ನಲಾಗಿದೆ.

ಕಾಂಗ್ರೆಸ್‌, ಗಾಂಧೀ ಕುಟುಂಬದ ಸ್ವತ್ತಾಗಿದೆ ಎಂದು ವಿಪಕ್ಷಗಳು ಹಲವು ಬಾರಿ ಆರೋಪ ಮಾಡಿದ್ದವಾದರೂ, ಅದಕ್ಕೆ ಎಂದಿಗೂ ಗಾಂಧೀ ಕುಟುಂಬ ನೇರವಾಗಿ ಸ್ಪಷ್ಟನೆ ಅಥವಾ ತಿರುಗೇಟು ನೀಡಿದ ಉದಾಹರಣೆ ಕಡಿಮೆ. ಜೊತೆಗೆ ಸ್ವತಃ ಗಾಂಧೀ ಕುಟುಂಬದ ಸದಸ್ಯರೊಬ್ಬರೇ, ನಮ್ಮ ಕುಟುಂಬಕ್ಕೆ ಹೊರತಾದ ನಾಯಕರ ಆಯ್ಕೆ ಮಾಡಿ ಎಂದು ಬಹಿರಂಗವಾಗಿ ಹೇಳಿದ ಉದಾಹರಣೆಗಳೂ ಕಡಿಮೆ.

ಸೋಲಿನ ಹೊರತೂ ರಾಹುಲ್‌ ಮೇಲೆ ವಿಶ್ವಾಸ

ಇಂಥದ್ದರಲ್ಲಿ ರಾಹುಲ್‌ ಏಕಾಏಕಿ ಇಂಥದ್ದೊಂದು ಗಂಭೀರ ವಿಷಯವನ್ನು ಪ್ರಸ್ತಾಪ ಮಾಡಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.