ದುಷ್ಕರ್ಮಿಗಳು ತಡರಾತ್ರಿ ಜಮೀನಿನಲ್ಲಿ  ಪುಡಿ ಮಾಡಿದ ನೋಟುಗಳ ಚೀಲ ಬಿಸಾಡಿದ್ದಾರೆ.

ಮಂಡ್ಯದ ಮೈಸೂರು-ಬೆಂಗಳೂರು ಹೆದ್ದಾರಿ ಜಮೀನಿನ ಬಳಿ 100 ರೂಪಾಯಿಗಳ ಕತ್ತರಿಸಿ ಪುಡಿ ಮಾಡಿರುವ ನೋಟಿನ ರಾಶಿ ಪತ್ತೆಯಾಗಿದೆ. ನಿಂಗೇಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ನೋಟಿನ ಚೂರುಗಳ ಚೀಲ ಪತ್ತೆಯಾಗಿದೆ. ದುಷ್ಕರ್ಮಿಗಳು ತಡರಾತ್ರಿ ಜಮೀನಿನಲ್ಲಿ ಪುಡಿ ಮಾಡಿದ ನೋಟುಗಳ ಚೀಲ ಬಿಸಾಡಿದ್ದಾರೆ. ಕತ್ತರಿಸಿ ಬಿಸಾಡಿರುವ ನೋಟಿನ ರಾಶಿ ಕಪ್ಪು ಹಣವಿರಬೇಕೆಂದು ಗ್ರಾಮಸ್ಥರ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add Asianetnews Kannada as a Preferred SourcegooglePreferred