ನವದೆಹಲಿ: ತಮ್ಮ ಜೀವನ ಆಧರಿತ ಸಂಜು ಚಿತ್ರ ಭರ್ಜರಿ ಯಶಸ್ಸು ಗಳಿಸಿದ ಬೆನ್ನಲ್ಲೇ, ತಮ್ಮ ಜೀವನದಲ್ಲಿ ನಡೆದ ಮತ್ತು ಹಿಂದೆಂದೂ ಯಾವುದೇ ವೇದಿಕೆಯಲ್ಲಿ ಬಹಿರಂಗಪಡಿಸಿದ ಕುತೂಹಲಭರಿತವಾದ ಸಂಗತಿಗಳನ್ನೊಳಗೊಂಡ ಆತ್ಮಕಥನ ರಚಿಸುವುದಾಗಿ ನಟ ಸಂಜಯ್‌ ದತ್‌ ಅವರು ಹೇಳಿದ್ದಾರೆ. 

ಸಂಜಯ್‌ರ 60ನೇ ಹುಟ್ಟುಹಬ್ಬದ ದಿನವಾದ 2019ರ ಜು.19ರಂದು ದತ್‌ ಅವರ ಆತ್ಮಕಥನವನ್ನು ಪ್ರಕಟಿಸುವುದಾಗಿ ಹಾರ್ಪರ್‌ ಕೊಲ್ಲಿನ್ಸ್‌ ಹೇಳಿದೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ನಟ ಸಂಜಯ್‌ ದತ್‌, ‘ನಾನು ಜೀವನದಲ್ಲಿ ಸಿಹಿ ಕಹಿ ಮತ್ತು ಸೋಲು-ಗೆಲುವುಗಳನ್ನು ಕಂಡಿದ್ದೇನೆ. ಆದಾಗ್ಯೂ, ನನ್ನ ಜೀವನದಲ್ಲಿ ನಡೆದ ಮತ್ತು ಎಲ್ಲಿಯೂ ಹೇಳದ ಕುತೂಹಲಕಾರಿ ಸಂಗತಿಗಳನ್ನು ಹೇಳಿಕೊಳ್ಳಬೇಕಿದೆ. 

ಅವುಗಳನ್ನು ಈ ಪುಸ್ತಕದ ಮೂಲಕ ಹೇಳಿಕೊಳ್ಳಲು ಕಾತರನಾಗಿದ್ದೇನೆ,’ ಎಂದು ಹೇಳಿದ್ದಾರೆ. ಸಂಜಯ್‌ ದತ್‌ ವಿವಾದಾತ್ಮಕ ಜೀವನಾಧರಿಸಿದ ರಣಬೀರ್‌ ಕಪೂರ್‌ ಅಭಿನಯದ ಸಂಜು ಚಿತ್ರವು ಈಗಾಗಲೇ 250 ಕೋಟಿ ರು. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ.