ಕಳೆದೆರಡು ದಿನಗಳಿಂದ ಯಾವುದೇ ಗಲಭೆಗಳು ನಡೆದಿಲ್ಲವಾದರೂ 7 ಗ್ರಾಮಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜೊತೆಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಇನ್ನೊಂದು ದಿನದಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ನಾಶಿಕ್, ಮಹಾರಾಷ್ಟ್ರ(ಅ. 15): ತ್ರ್ಯಂಬಕೇಶ್ವರ್ ಮತ್ತು ಇಗಾತಪುರಿ ತಾಲೂಕಿನ ಏಳು ಗ್ರಾಮಗಳಲ್ಲಿ ಕರ್ಫ್ಯೂ ಹೇರಿಕೆ ಶನಿವಾರವೂ ಮುಂದುವರಿದಿದೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಯತ್ನ ನಡೆದ ಘಟನೆ ಸಂಬಂಧ ಈ ಎರಡು ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಲಭೆಯೇ ನಡೆದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಅನೇಕ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಕಳೆದೆರಡು ದಿನಗಳಿಂದ ಯಾವುದೇ ಗಲಭೆಗಳು ನಡೆದಿಲ್ಲವಾದರೂ 7 ಗ್ರಾಮಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜೊತೆಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಇನ್ನೊಂದು ದಿನದಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ತ್ರೆಂಬಕೇಶ್ವರ್ ಸಮೀಪದ ತಾಲೇಗಾಂವ್ ಗ್ರಾಮದಲ್ಲಿ 5 ವರ್ಷದ ಹುಡುಗಿ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದು ಅಕ್ಕಪಕ್ಕ ಊರಿನಲ್ಲಿ ಪ್ರಕ್ಷುಬ್ಬ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿತು. ನಾಸಿಕ್'ವರೆಗೂ ಅನೇಕ ಗ್ರಾಮಗಳಲ್ಲಿ ಗಲಭೆಗಳಾಗಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿತ್ತು. ಗಲಭೆ ಸಂಬಂಧ ಈವರೆಗೆ 117 ಮಂದಿಯನ್ನು ಬಂಧಿಸಲಾಗಿದೆ.

ಪಿಟಿಐ ವರದಿ