ನಟ ಅರ್ಜುನ್ ಸರ್ಜಾ-ಶೃತಿ ಹರಿಹರನ್ MeToo ರಂಪಾಟ ಹೊಸ ತಿರುವು ಪಡೆದುಕೊಂಡಿದೆ. ಅದೇನಂತೀರಾ ಇಲ್ಲಿದೆ ನೋಡಿ.

ಬೆಂಗಳೂರು, [ಅ.30]: ನಟ ಅರ್ಜುನ್ ಸರ್ಜಾ-ಶೃತಿ ಹರಿಹರನ್ ರಂಪಾಟಕ್ಕೆ ಹೊಸ ತಿರುವು ಪಡೆದುಕೊಂಡಿದೆ. ‘ವಿಸ್ಮಯ’ ಚಿತ್ರ ನೋಡಿರುವ ಪೊಲೀಸರು ಎಂಥೆಂತಾ ಸೀನ್ ಇತ್ತು ಅಂತ ಹುಡುಕಲು ಹೊರಟಿದ್ದಾರೆ. 

ರಿಹರ್ಸಲ್ ಹೆಸರಲ್ಲಿ ರೊಮ್ಯಾನ್ಸ್ ಮಾಡಿದ್ರು ಎನ್ನುವುದು ಶೃತಿ ದೂರು. ಅರ್ಜುನ್ ಸರ್ಜಾ ವಿರುದ್ಧ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಶೃತಿ ಎಷ್ಟೋ ಸೀನ್ಸ್ ನಾನೇ ಕಟ್ ಮಾಡಿಸಿದ್ದೇನೆಂದೂ ತಿಳಿಸಿದ್ದಾರೆ. 

‘4 ಕಡೆ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದರು’

ಅತ್ತ ಮತ್ತೊಂದೆಡೆ ವಿಸ್ಮಯ ಚಿತ್ರದಲ್ಲಿ ತುಂಬಾ ರೊಮ್ಯಾನ್ಸ್ ಸೀನ್ ಇತ್ತು ಆದ್ರೆ ಸರ್ಜಾ ಆಕ್ಷೇಪಿಸಿದ್ದಕ್ಕೆ ಕಟ್ ಮಾಡಲಾಗಿದೆ, ಸ್ಕ್ರಿಪ್ಟ್ ಹಂತದಲ್ಲೇ ಅತಿಯಾಗಿದ್ದ ರೊಮ್ಯಾನ್ಸ್ ಸೀನ್ಸ್​​ಗೆ ಕತ್ತರಿ ಹಾಕಿದ್ದೆ ಎಂದು ನಿರ್ದೇಶಕ ಅರುಣ್ ವೈದ್ಯನಾಥನ್ ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಯಾವ್ಯಾವ ರೊಮ್ಯಾನ್ಸ್ ಸೀನ್ಸ್ ಇತ್ತು ಅಂತ ಕಬ್ಬನ್​ ಪಾರ್ಕ್​​ ಪೊಲೀಸರು ಹುಡಕಲು ಹೊರಟಿದ್ದು, ಶೂಟ್ ಆಗಿದ್ದ ರೊಮ್ಯಾನ್ಸ್ ಸೀನ್ಸ್, ಶೂಟ್ ಮಾಡದ ರೊಮ್ಯಾನ್ಸ್ ಬಗ್ಗೆ ತಿಳಿಯಲು ತನಿಖೆ ನಡೆಸಲಾಗ್ತಿದೆ. 

ನಿರ್ದೇಶಕರು ಈ ಹಿಂದೆ ಕಟ್ ಮಾಡಿಟ್ಟಿರುವ ರೊಮ್ಯಾನ್ಸ್ ಸೀನ್ಸ್​​​ಗೆ ಪೊಲೀಸರ ಶೋಧ ನಡೆಸ್ತಿದ್ದಾರೆ. ಹೀಗಾಗಿ ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್​​ಗೆ ನೋಟಿಸ್ ಜಾರಿಗೆ ಪೊಲೀಸರಿಂದ ಸಿದ್ಧತೆ ನಡೆಸಿದ್ದಾರೆ ಅಂತ ತಿಳಿದುಬಂದಿದೆ.