ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು 1996-97ರಲ್ಲಿ ಭಾರತದ ಪ್ರಧಾನಿಯಾಗಿದ್ದರು. ಅಲ್ಪ ಅವಧಿಯಲ್ಲೇ ಅವರು ಸಾಕಷ್ಟು ಕೆಲಸಗಳ ಮೂಲಕ ಗಮನ ಸೆಳೆದಿದ್ದರು. ಆ ಮೂಲಕ ವಾಜಪೇಯಿ, ಆಡ್ವಾಣಿ ಸೇರಿದಂತೆ ಹಲವು ಶ್ರೇಷ್ಠ ರಾಜಕಾರಣಿಗಳಿಂದ ಈಗಲೂ ಗೌರವ ಉಳಿಸಿಕೊಂಡಿದ್ದಾರೆ.

ಬೆಂಗಳೂರು: ಮಣ್ಣಿನ ಮಗ ಹೆಚ್.ಡಿ.ದೇವೇಗೌಡರನ್ನು ಹಂಗಿಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಬಿಜೆಪಿ ಮುಖಂಡ ಸಿಟಿ ರವಿ ತಿರುಗೇಟು ನೀಡಿದ್ದಾರೆ. ದೇವೇಗೌಡರು ದೇಶದ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಯು ಅಬ್ಬುಲ್ಲಾರಂತಹ ಕಳ್ಳರ ಕುಟುಂಬಕ್ಕೆ ಹೇಗೆ ಕಾಣುತ್ತದೆ ಎಂದು ಸಿಟಿ ಪ್ರಶ್ನಿಸಿದ್ದಾರೆ.

Scroll to load tweet…

"ಮಣ್ಣಿನ ಮಗ ದೇವೇಗೌಡರು ದೇಶದ ಅಭಿವೃದ್ಧಿಗೆ ಮಾಡಿರುವ ಕೆಲಸಗಳನ್ನು ವಂಚಕರೇ ತುಂಬಿರುವ ಅಬ್ದುಲ್ಲಾ ಕುಟುಂಬ ಊಹಿಸಲೂ ಸಾಧ್ಯವಿಲ್ಲ" ಎಂದು ಸಿ.ಟಿ.ರವಿ ಮೊನ್ನೆ ಟ್ವೀಟ್ ಮಾಡಿದ್ದಾರೆ.

ಅಬ್ದುಲ್ಲಾ ಹೇಳಿದ್ದೇನು?
ಪಾಕಿಸ್ತಾನದಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ತಲುಪಲು ಭಾರತದ ರಾಯಭಾರಿ ಕಚೇರಿ ತೀವ್ರ ಪ್ರಯತ್ನ ನಡೆಸಿದೆ. ಆದರೆ, ಪಾಕಿಸ್ತಾನ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಸುದ್ದಿ ವಾಹಿನಿಯು 3 ದಿನಗಳ ಹಿಂದೆ ಪರ್ವೆಜ್ ಮುಷರಫ್ ಜೊತೆ ಸಂದರ್ಶನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಒಮರ್ ಅಬ್ದುಲ್ಲಾ, "ಪಾಕಿಸ್ತಾನದ ಚಾನೆಲ್'ಗಳು ಭಾರತದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೇವೇಗೌಡರ ಜೊತೆ ಮಾತನಾಡುವಂತಾಯಿತು" ಎಂದು ಹಂಗಿಸಿ ಟ್ವೀಟ್ ಮಾಡಿದ್ದಾರೆ.