ಸಂತೋಷ್ ರಾಷ್ಟ್ರಕ್ಕಾಗಿ ಬದುಕನ್ನೇ ಸಮರ್ಪಣೆ ಮಾಡಿಕೊಂಡವರು. ವೈಚಾರಿಕ ಹಿನ್ನೆಲೆಯುಳ್ಳಂತಹ ಬಿಜೆಪಿ ಪಕ್ಷಕ್ಕೆ ಅವರು ದೊಡ್ಡ ಶಕ್ತಿಯೇ ಆಗಿದ್ದಾರೆ ಎಂದು ರವಿ ಹೇಳಿದ್ದಾರೆ.

ಚಿಕ್ಕಮಗಳೂರು (ಮೇ.01): ಆರೆಸ್ಸೆಸ್ ಮುಖಂಡ ಸಂತೋಷ್ ಪರ ಮಾಜಿ ಸಚಿವ ಸಿ.ಟಿ ರವಿ ಬ್ಯಾಟಿಂಗ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಯಲ್ಲಿ ನಡೆಯುತ್ತಿರುವ ಸದ್ಯದ ವಿದ್ಯಾಮಾನಗಳ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಂತೋಷ್ ಅವರ ಮೇಲಿನ ಆರೋಪಕ್ಕೆ ಯಾವುದೇ ಅರ್ಥವಿಲ್ಲ ಎಂದಿದ್ಧಾರೆ.

ಸಂತೋಷ್ ರಾಷ್ಟ್ರಕ್ಕಾಗಿ ಬದುಕನ್ನೇ ಸಮರ್ಪಣೆ ಮಾಡಿಕೊಂಡವರು. ವೈಚಾರಿಕ ಹಿನ್ನೆಲೆಯುಳ್ಳಂತಹ ಬಿಜೆಪಿ ಪಕ್ಷಕ್ಕೆ ಅವರು ದೊಡ್ಡ ಶಕ್ತಿಯೇ ಆಗಿದ್ದಾರೆ ಎಂದು ರವಿ ಹೇಳಿದ್ದಾರೆ.

ಸಂತೋಷ್ ನಿಷ್ಠುರವಾಗಿ ಮಾತನಾಡುತ್ತಾರೆ. ಆದರೆ ಅವರಿಗೆ ಯಾವುದೇ ಆಸೆ-ಆಕಾಂಕ್ಷೆ ಇಲ್ಲ ಎನ್ನುವ ಮೂಲಕ ಸಂತೋಷ್ ಬೆಂಬಲಕ್ಕೆ ಸಿ.ಟಿ.ರವಿ ನಿಂತಿದ್ದಾರೆ.