ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಮಾಲ ಉತ್ಸವ ಹಿನ್ನಲೆಯಲ್ಲಿ  ದತ್ತ ಭಕ್ತರಿಂದ ಭಿಕ್ಷಾಟನೆ ನಡೆಯಿತು.

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸುತ್ತಿರುವ ದತ್ತಮಾಲ ಉತ್ಸವ ಹಿನ್ನಲೆಯಲ್ಲಿ ದತ್ತ ಭಕ್ತರಿಂದ ಭಿಕ್ಷಾಟನೆ ನಡೆಯಿತು.

ಪ್ರಮುಖವಾಗಿ ಶಾಸಕ ಸಿ.ಟಿ ರವಿ ಮತ್ತು ದತ್ತ ಭಕ್ತರು ನಗರದ ನಾರಾಯಣಪುರ ಬಡಾವಣೆ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿದರು.

ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ, ಮತ್ತು ಕಾಯಿ ಪ್ರಿಯವಾದರಿಂದ ಇದನ್ನೇ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವುದರ ಮೂಲಕ ಪಡಿಯನ್ನು ಸಂಗ್ರಹ ಮಾಡಿದರು.